Monday, August 8, 2022

Latest Posts

ಚಂಡಮಾರುತ ಎಫೆಕ್ಟ್: ನೌಕೆಯಲ್ಲಿ ಸಿಲುಕಿರುವವರ ರಕ್ಷಣೆಗೆ ಮುಂದಾದ ಭಾರತೀಯ ನೌಕಾದಳದ ಹೆಲಿಕಾಪ್ಟರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಉಡುಪಿ:

ಕಾಪು ಸಮೀಪ ಅರಬ್ಬಿ ಸಮುದ್ರದಲ್ಲಿ ದುರಂತಕ್ಕೊಳಗಾದ ನೌಕೆಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಭಾರತೀಯ ನೌಕಾದಳದ ಹೆಲಿಕಾಪ್ಟರ್ 9 ಮಂದಿಯ ರಕ್ಷಣೆಯಲ್ಲಿ ತೊಡಗಿದೆ.
ಎಂಆರ್‌ಪಿಎಲ್ ಸಂಸ್ಥೆಗೆ ಸಂಬಂಧಿಸಿದ ನೌಕೆ (ಗುತ್ತಿಗೆ) ಸಿಬ್ಬಂದಿ ಕಳೆದ 42 ತಾಸುಗಳಿಂದ ಸಮುದ್ರ ಮಧ್ಯೆ ಸಿಲುಕಿದ್ದಾರೆ. ತೌಕ್ತೆ ಚಂಡಮಾರುತದಿಂದಾಗಿ ಸಮುದ್ರ ರೌದ್ರಾವತಾರ ತಾಳಿದ್ದರಿಂದ ನವಮಂಗಳೂರು ಬಂದರು ಹೊರಭಾಗದಲ್ಲಿ ಲಂಗರು ಹಾಕಿದ್ದ ನೌಕೆ ಲಂಗರು ತುಂಡಾಗಿ ಸಂಪರ್ಕ ಕಳೆದುಕೊಂಡಿತು. ಕಾಪು ದೀಪಸ್ತಂಭದಿಂದ ಸುಮಾರು 4-5 ಕಿ.ಮೀ. ದೂರದಲ್ಲಿ ಬಂಡೆಯೊಂದಕ್ಕೆ ಢಿಕ್ಕಿ ಹೊಡೆದು ಅಪಾಯಕ್ಕೆ ಸಿಲುಕಿತ್ತು.
ನೌಕೆಯಲ್ಲಿ 9 ಮಂದಿ ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಮಳೆ, ಗಾಳಿ, ಅಲೆಗಳ ಅಬ್ಬರಕ್ಕೆ ಸಿಲುಕಿ ಅಸ್ವಸ್ಥಗೊಳ್ಳುವ ಸ್ಥಿತಿ ತಲುಪಿದ್ದು, ಇದೀಗ ನೌಕಾದಳದ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
ನಿನ್ನೆಯೇ ಕೇಂದ್ರ ಸರಕಾರ ನೌಕಾದಳದ ಹೆಲಿಕಾಪ್ಟರ್ ಬಳಕೆ ಅನುಮತಿ ನೀಡಿತ್ತು. ಗೋವಾದಿಂದ ಹೆಲಿಕಾಪ್ಟರ್ ಆಗಮನಕ್ಕೆ ಹವಾಮಾನ ಪೂರಕವಾಗಿರಲಿಲ್ಲ. ಇದೀಗ ಕೊಚ್ಚಿನ್ ನಿಂದ ನೇವಿ ಹೆಲಿಕಾಪ್ಟರ್ ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದೆ.

ಮಧ್ಯಾಹ್ನ ಕಂದಾಯ ಸಚಿವರ ಭೇಟಿ-ಸಭೆ: ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಚಂಡಮಾರುತದಿಂದ  ಕರಾವಳಿ ಜಿಲ್ಲೆಗಳಲ್ಲಿ ಸಂಭವಿಸಿದ ಹಾನಿಯ ಪರಿಶೀಲನೆಗೆ ಇಂದು ಭೇಟಿ ನೀಡುತ್ತಾರೆ. ನವ ಮಂಗಳೂರು ಎನ್‌ಎಂಪಿಟಿ ಕಚೇರಿಯಲ್ಲಿ ತೌಕ್ತೆದರ ಚಂಡಮಾರುತದಿಂದ ಆಗಿರುವ ಹಾನಿ, ಸಮುದ್ರದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಕುರಿತು ಎನ್‌ಎಂಪಿಟಿ, ಎಂಆರ್‌ಪಿಎಲ್, ಇಂಡಿಯನ್ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss