Monday, August 8, 2022

Latest Posts

ತೌಕ್ತೆ ಎಫೆಕ್ಟ್ : ಕಾಸರಗೋಡು ಜಿಲ್ಲೆಯಲ್ಲಿ 135.48 ಲ.ರೂ.ಗಳ ಕೃಷಿ ನಾಶ, 9 ಮನೆಗಳಿಗೆ ಪೂರ್ಣ ಹಾನಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ವರದಿ, ಕಾಸರಗೋಡು:

ತೌಕ್ತೆ ಚಂಡಮಾರುತದ ಪರಿಣಾಮ ಬಿರುಸಿನ ಗಾಳಿ ಹಾಗೂ ಧಾರಾಕಾರ ಮಳೆಯಿಂದಾಗಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 135.48 ಲಕ್ಷ ರೂಪಾಯಿಗಳ ಕೃಷಿ ನಾಶವಾಗಿದೆ. 9 ಮನೆಗಳಿಗೆ ಪೂರ್ಣರೂಪದಲ್ಲಿ ಹಾನಿ ಸಂಭವಿಸಿದೆ.
ಅಲ್ಲದೆ ಜಿಲ್ಲೆಯಲ್ಲಿ 208 ಮಂದಿ ಕೃಷಿಕರು ನಾಶ ನಷ್ಟ ಅನುಭವಿಸಿದ್ದಾರೆ. 9 ಮನೆಗಳು ಪೂರ್ಣರೂಪದಲ್ಲಿ , 82 ಮನೆಗಳು ಭಾಗಶಃ ಹಾನಿಗೊಂಡಿವೆ. ಮನೆಯ ಆವರಣ ಗೋಡೆ ಕುಸಿದು ಇಬ್ಬರು ಮತ್ತು ಸಿಡಿಲ ಆಘಾತಕ್ಕೆ ಒಬ್ಬರು ಗಾಯಗೊಂಡಿದ್ದಾರೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯ 241 ಮಂದಿ ಕೃಷಿಕರಿಗೆ 19.64 ಲಕ್ಷ ರೂ.ಗಳ ಕೃಷಿ ನಾಶ, ಕಾಸರಗೋಡು ಬ್ಲಾಕ್ ಪಂಚಾಯತ್ ನಲ್ಲಿ 1044 ಮಂದಿ ಕೃಷಿಕರಿಗೆ 45.83 ಲಕ್ಷ ರೂ.ಗಳ ನಾಶ, ಕಾರಡ್ಕ ಬ್ಲಾಕ್ ಪಂಚಾಯತ್ ವ್ಯಾಪ್ತಿಯ 45 ಮಂದಿ ಕೃಷಿಕರಿಗೆ 2.63 ಲಕ್ಷ ರೂ.ಗಳ ನಾಶ, ಕಾಞಂಗಾಡು ಬ್ಲಾಕ್ ಪಂಚಾಯತ್ ನಲ್ಲಿ 121 ಮಂದಿ ಕೃಷಿಕರಿಗೆ 11.23 ಲಕ್ಷ ರೂ.ಗಳ ಕೃಷಿ ನಾಶ, ನೀಲೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯ 562 ಮಂದಿ ಕೃಷಿಕರಿಗೆ 38.96 ಲಕ್ಷ ರೂ.ಗಳ ನಾಶ, ಪರಪ್ಪ ಬ್ಲಾಕ್ ಪಂಚಾಯತ್ ನಲ್ಲಿ 195 ಮಂದಿ ಕೃಷಿಕರಿಗೆ 17.19 ಲಕ್ಷ ರೂ.ಗಳ ಕೃಷಿ ನಾಶ ನಷ್ಟ ಉಂಟಾಗಿದೆ.
ಭತ್ತ , ತೆಂಗು, ಬಾಳೆ, ರಬ್ಬರ್, ಅಡಕೆ, ಇತರ ಕೃಷಿ ಹಾಗೂ ತರಕಾರಿ ಕೃಷಿಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಹಾನಿಯಾಗಿದೆ. ಮಂಜೇಶ್ವರ ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ತಲಾ 4 ಮನೆಗಳಿಗೆ ಅಲ್ಲದೆ ವೆಳ್ಳರಿಕುಂಡು ತಾಲೂಕಿನಲ್ಲಿ ಒಂದು ಮನೆಗೆ ಪೂರ್ಣಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹೊಸದುರ್ಗ ತಾಲೂಕಿನಲ್ಲಿ 50 ಮನೆಗಳು, ವೆಳ್ಳರಿಕುಂಡು 14, ಕಾಸರಗೋಡು 12, ಮಂಜೇಶ್ವರ ತಾಲೂಕಿನಲ್ಲಿ 6 ಮನೆಗಳು ಭಾಗಶಃ ಹಾನಿಯಾಗಿವೆ.
ಕಾಸರಗೋಡು ಜಿಲ್ಲೆಯಲ್ಲಿ ಸಂತ್ರಸ್ತರ ಶಿಬಿರ ಸಜ್ಜುಗೊಂಡಿದ್ದರೂ, ಒಂದು ಶಿಬಿರವೂ ಚಟುವಟಿಕೆ ಆರಂಭಿಸಲಿಲ್ಲ. 161 ಕುಟುಂಬಗಳ ಒಟ್ಟು 637 ಮಂದಿಯನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ಹೊಸದುರ್ಗ ತಾಲೂಕಿನಲ್ಲಿ 130 ಕುಟುಂಬಗಳ 452 ಮಂದಿ, ಕಾಸರಗೋಡು ತಾಲೂಕಿನಲ್ಲಿ 4 ಕುಟುಂಬಗಳ 19 ಮಂದಿ, ಮಂಜೇಶ್ವರ ತಾಲೂಕಿನ 27 ಕುಟುಂಬಗಳ 166 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮೀನುಗಾರಿಕಾ ವಲಯಗಳ ಅನೇಕ ಮನೆಗಳಿಗೆ, ಫೈಬರ್ ಬೋಟುಗಳಿಗೆ ಹಾನಿಯಾಗಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಕಳೆದ 24 ತಾಸುಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 23.47 ಮಿ.ಮೀ. ಮಳೆ ಸುರಿದಿರುವುದು ದಾಖಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss