ಟಿಬಿ ಮುಕ್ತ ಭಾರತ ಅಭಿಯಾನ: 10 ರೋಗಿಗಳನ್ನು ದತ್ತು ಪಡೆದ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ 

ಹೊಸದಿಗಂತ ವರದಿ ಬಳ್ಳಾರಿ:

ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ಆಶಯದಂತೆ, 2030ರ ವೇಳೆಗೆ `ಟಿಬಿ ಮುಕ್ತ ಭಾರತ ಅಭಿಯಾನ’ಕ್ಕೆ ಸ್ಪಂದಿಸಿರುವ ಬಳ್ಳಾರಿ – ವಿಜಯನಗರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, 10 ಜನ ಕ್ಷಯ ರೋಗಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆಯುವ ಮೂಲಕ ಗಮನಸೆಳೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಜೀ ಅವರು `ಟಿಬಿ ಮುಕ್ತ ಭಾರತ ಅಭಿಯಾನ’ದ ನಿಮಿತ್ತ ನಡೆದ `ಮನ್ ಕಿ ಬಾತ್’ನಲ್ಲಿ ಮೋದಿಜೀ ಅವರು, ದಾನಿಗಳು, ಕಾರ್ಪೊರೇಟ್ ಕಚೇರಿಗಳು, ಎನ್‍ಜಿಓಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಆರೋಗ್ಯ ಸುಧಾರಣೆಗೆ ಸ್ಪಂಧಿಸಬೇಕು ಎಂದು ಕರೆ ನೀಡಿದ್ದರು.

ಈ ಹಿನ್ನಲೆಯಲ್ಲಿ ತ್ವರಿತವಾಗಿ ಸ್ಪಂದಿಸಿದ ಎಮ್ಮೆಲ್ಸಿ ವೈ.ಎಂ.ಸತೀಶ್ ಅವರು, ತಾವು ದತ್ತು ಪಡೆದ 10 ಜನ ಕ್ಷಯ ರೋಗಿಗಳನ್ನು ಬಳ್ಳಾರಿ ನಗರದ ರಾಣಿತೋಟದಲ್ಲಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಭೇಟಿ ಮಾಡಿ, ಕ್ಷಯರೋಗದಿಂದ ನರಳುತ್ತಿರುವವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದರೇ ವ್ಯಾಧಿಯು ಸಂಪೂರ್ಣ ಗುಣಮುಖವಾಗಲಿದೆ. ರೋಗಿಗಳು ಪೌಷ್ಠಿಕ ಆಹಾರವನ್ನು ಸೇವನೆ ಮಾಡಬೇಕು ಎಂದು ಹೇಳಿದರು. ರೋಗಿಗಳು, ಔಷಧಿಯನ್ನು ಸರಿಯಾಗಿ ಪಡೆದು, ದೇಶವನ್ನು ಕ್ಷಯಮುಕ್ತಗೊಳಿಸಲು ಸಹಕರಿಸಬೇಕು, ದಾನಿಗಳು ನೀಡುವ ಪೌಷ್ಠಿಕ ಆಹಾರವನ್ನು ಪಡೆದು ಗುಣಮುಖರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕ್ಷಯ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ ಅವರು ಮಾತನಾಡಿ, ದತ್ತು ಸ್ವೀಕೃತವಾದ ಕ್ಷಯ ರೋಗಿಗಳು, ದಾನಿಗಳು ನಿಸ್ವಾರ್ಥವಾಗಿ ಸಲ್ಲಿಸಿರುವ ಸೇವೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು, ಶೀಘ್ರದಲ್ಲೇ ಗುಣಮುಖರಾಗಿ ದಾನಿಗಳ ಸೇವೆಗೆ ಸಾರ್ಥಕತೆ ಮೆರೆಯಬೇಕು. ರೋಗಿಗಳ ಆರೋಗ್ಯ ಸುಧಾರಣೆಯಿಂದ ದಾನಿಗಳ ಸಂಖ್ಯೆ ಹೆಚ್ಚಲಿದೆ ಎಂದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!