spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅವಕಾಶಗಳ ಬಾಗಿಲು ತೆರೆದಿರುವ ಟಿಸಿಎಸ್, ಮತ್ತೆ ವೃತ್ತಿ ಶುರುಮಾಡುವ ಮಹಿಳೆಯರಿಗೆ ಆದ್ಯತೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದ ಅತಿ ದೊಡ್ಡ ಸಾಫ್ಟ್‌ವೇರ್  ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಉದ್ಯೋಗ ಹುಡುಕುತ್ತಿರುವ ಪ್ರತಿಭಾವಂತ ಮಹಿಳೆಯರಿಗೆ ದೊಡ್ಡ ಆಫರ್ ನೀಡಿದೆ.

ಹೌದು.. ಐಟಿ ವೃತ್ತಿಯಲ್ಲಿ ಕನಿಷ್ಠ ಎರಡು ವರ್ಷವಾದರೂ ಅನುಭವ ಹೊಂದಿರು  ಮಹಿಳೆಯರ ಅತಿ ದೊಡ್ಡ ನೇಮಕಾತಿಗೆ ಟಿಸಿಎಸ್ ಮುಂದಾಗಿದೆ.

‘ಪ್ರತಿಭಾವಂತ ಮತ್ತು ಸಾಮರ್ಥವುಳ್ಳ ಮಹಿಳೆಯರು ಯಾವಾಗಲೂ ಮತ್ತೊಬ್ಬರಿಗೆ ಸ್ಫೂರ್ತಿಯ ಚಿಲುಮೆಯಾಗಿರುತ್ತಾರೆ. ಅಂಥ ಪ್ರತಿಭಾವಂತ ಮಹಿಳೆಯರಿಗೆ ಇದು ಉತ್ತಮ ಅವಕಾಶ. ಈ ಆಫರ್ ಸದುಪಯೋಗ ಪಡೆದುಕೊಳ್ಳಿ ಮತ್ತು ಟಿಸಿಎಸ್‌ನೊಂದಿಗೆ ಪಾಲುದಾರಿಕೆದಾರರಾಗಿ’ ಎಂದು ಟಿಸಿಎಸ್ ಸಂಸ್ಥೆ ಹೇಳಿದೆ.

‘ಕೆಲವು ಮಹಿಳೆಯರು ಕೌಂಟುಂಬಿಕ ಮತ್ತು ವೈಯಕ್ತಿಕ ಕಾರಣದಿಂದ ಎರಡು ವರ್ಷ ಕೆಲಸ ಮಾಡಿ ನಂತರ ವಿರಾಮ ತೆಗೆದುಕೊಂಡಿರುತ್ತಾರೆ. ವಿರಾಮದ ನಂತರ ಮತ್ತೆ ಕೆಲಸಕ್ಕೆ ಮರಳುವ ಮನಸ್ಥಿತಿ ಹೊಂದಿರುವವರಿಗೆ ಇದು ಒಳ್ಳೆಯ ಅವಕಾಶ. ನಿಮ್ಮಲ್ಲಿರುವ ಪ್ರತಿಭೆಯನ್ನು ನಾವು ಗೌರವಿಸುತ್ತೇವೆ. ನಿಮ್ಮ ಪ್ರತಿಭೆ ಜಗತ್ತನ್ನೇ ಬದಲಿಸಬಹುದೆಂದು ನಂಬುತ್ತೇವೆ. ಅಂತಹ ಪ್ರತಿಭಾವಂತರಿಗೆ ಟಿಸಿಎಸ್ ಬಾಗಿಲು ತೆರೆದಿದೆ’ ಎಂದು ಟಿಸಿಎಸ್ ಸಂಸ್ಥೆ ಹೇಳಿದೆ

ಈ ವರ್ಷ ಜೂನ್‌ನಲ್ಲಿ ಟಿಸಿಎಸ್ 20,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಇದು ಮೂರು ತಿಂಗಳ ಅವಧಿಯಲ್ಲಿನ ಅತಿ ಹೆಚ್ಚು ನೇಮಕಾತಿಗಳಲ್ಲಿ ಒಂದಾಗಿದೆ. ಈ ಮೂಲಕ ಒಟ್ಟು ಟಿಸಿಎಸ್ ನ  ಉದ್ಯೋಗಿಗಳ ಸಂಖ್ಯೆ 5 ಲಕ್ಷಕ್ಕಿಂತ ಹೆಚ್ಚಾಗಿದೆ.

ಟಿಸಿಎಸ್ ಪ್ರತಿ ವರ್ಷ 40,000 ಸಾವಿರಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳುತ್ತಿದ್ದು, ಈ ವಿತ್ತೀಯ ವರ್ಷದಲ್ಲೂ ಟಿಸಿಎಸ್ 40,000 ಹೊಸಬರನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ. ದೇಶದ ತಂತ್ರಜ್ಞಾನ ಉದ್ಯೋಗದಾತರ ಪಟ್ಟಿಯಲ್ಲಿ ಟಿಸಿಎಸ್ ಎರಡನೇ ಸ್ಥಾನದಲ್ಲಿದ್ದು, 5.37 ಲಕ್ಷ ಉದ್ಯೋಗಿಗಳೊಂದಿಗೆ ಅಕ್ಸೆಂಚರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

‘ಉದ್ಯೋಗಿಗಳು ಕೆಲಸವನ್ನು ಉಳಿಸಿಕೊಳ್ಳು ಹೆಣಗಾಡುತ್ತಿರುವ ಈ ಸಮಯದಲ್ಲಿ, ಹೊಸಬರನ್ನು ನೇಮಕಾತಿ ಮಾಡಿಕೊಳ್ಳುವ ಬದಲು, ಅನುಭವಿಗಳನ್ನು ನೇಮಿಸಿಕೊಂಡು ತರಬೇತಿ ನೀಡಿ, ಅವರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದರೆ ಕಂಪನಿಗೆ ಲಾಭವಿದೆ’ ಎಂದು ಸಿಒಒ ಎನ್. ಗಣಪತಿ ಸುಬ್ರಮಣ್ಯಂ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss