Wednesday, February 28, 2024

ವಿದ್ಯಾರ್ಥಿಯ ಮೇಲೆ ಶಿಕ್ಷಕನ ಹಲ್ಲೆ: ಪೋಷಕರು ಆಕ್ರೋಶ

ಹೊಸದಿಗಂತ ವರದಿ, ಮುಂಡಗೋಡ:

ಪಟ್ಟಣದ ಖಾಸಗಿ ಸಂಸ್ಥೆಯ ಇಂಗ್ಲೀಷ ಮಾಧ್ಯಮದ ೯ನೇ ತರಗತಿಯ ವಿದ್ಯಾರ್ಥಿಯ ಮೇಲೆ ದೈಹಿಕ ಶಿಕ್ಷಕನೊಬ್ಬ ಹಲ್ಲೆ ನಡೆಸಿದ್ದು ವಿದ್ಯಾರ್ಥಿಯ ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪಟ್ಟಣದ ಖಾಸಗಿ ಶಾಲಾ ಸಂಸ್ಥೆಯ ೯ನೇ ತರಗತಿಯ ವಿದ್ಯಾರ್ಥಿಗೆ ದೈಹಿಕ ಶಿಕ್ಷಕ ಕಿವಿ ಮತ್ತು ಮುಖಕ್ಕೆ ಕೈಯಿಂದ ಹಲ್ಲೆ ಮಾಡಿದಲ್ಲದೆ ಬೆತ್ತದಿಂದ ಹೊಡೆದಿದ್ದಾನೆ. ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಗುರುವಾರ ತರಗತಿಯಿಂದ ಕೆಲವು ವಿದ್ಯಾರ್ಥಿಗಳನ್ನು ಹೊರಹೊಕ್ಕಿದ್ದನು. ಆ ವೇಳೆ ಈ ವಿದ್ಯಾರ್ಥಿ ಮಾತನಾಡುತ್ತಿದ್ದ ಎಂಬ ನೇಪದಲ್ಲಿ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಮನಸ್ಸು ಇಚ್ಚೆಯಿಂದ ಹೊಡೆದಿದ್ದಾನೆ. ನಂತರ ವಿದ್ಯಾರ್ಥಿಯೂ ತಮ್ಮ ಪಾಲಕರಿಗೆ ತಿಳಿಸಿದಾಗ ಪಾಲಕರು ವಿದ್ಯಾರ್ಥಿಗೆ ಚಿಕಿತ್ಸೆ ಕೊಡಸಿದ್ದಾರೆ. ವೈದ್ಯರು ಪರೀಕ್ಷಿಸಿ ಕಿವಿಯಲ್ಲಿ ಬಾವು ಬಂದಿರುವುದುದಾಗಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಯ ಪಾಲಕರು ಪೊಲೀಸ್ ಠಾಣೆಗೆ ತೆರಳಿ ಶಿಕ್ಷಕನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಕೆಲವರು ಪಾಲಕರನ್ನು ಸಮಾಧಾನಪಡಿಸಿ ಪ್ರಕರಣ ದಾಖಲಿಸಿದಂತೆ ತಡೆದರು ಎನ್ನಲಾಗಿದೆ.

ಖಾಸಗಿ ಶಾಲೆಯಲ್ಲಿ ಸಭೆ: ಖಾಸಗಿ ಶಾಲೆಯ ಕಮಿಟಿಯವರೊಂದಿಗೆ ಬಿಇಒ ಮತ್ತು ಸಿಪಿಐ ನೇತ್ರತ್ವದಲ್ಲಿ ಸಭೆ ನಡೆಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡು ಮಕ್ಕಳನ್ನು ಹೊಡೆಯಬಾರದು. ಮಕ್ಕಳ ಮನವೊಲಿಸಿ ಶಿಕ್ಷಣ ನೀಡಬೇಕು. ಮಕ್ಕಳ ಮೇಲೆ ಹೊಡೆದಿರುವುದು ಸರಿ ಅಲ್ಲ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಯ ಮನೆಗೆ ಬಿಇಒ ಜಕಣಾಚಾರಿ ಭೇಟಿ: ಖಾಸಗಿ ಶಾಲೆಯಲ್ಲಿ ಸಭೆ ನಡೆಸಿ ನಂತರ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿದರು. ನಂತರ ಪಾಲಕರ ಜೊತೆ ಮಾತನಾಡಿ ಮಗುವಿಗೆ ಒಳ್ಳೆಯ ಚಿಕಿತ್ಸೆ ನೀಡುವಂತೆ ಸಲಹೆ ನೀಡಿ ದೈಹಿಕ ಶಿಕ್ಷಕ ಹೊಡೆದಿರುವುದು ತಪ್ಪು. ಈ ಬಗ್ಗೆ ಕ್ಷಮೆಯಾಚಿಸಿದರು.

ಕಿರಣ ವಿಠ್ಠಲಕರ್ ವಿದ್ಯಾರ್ಥಿ ಪಾಲಕ: ದೈಹಿಕ ಶಿಕ್ಷಕ ನನ್ನ ಮಗನಿಗೆ ಮುಖ,ಕಿವಿಗೆ ಹೊಡೆದಿದ್ದಾರೆ. ಅಲ್ಲದೆ ಬೆತ್ತದಿಂದ ಹೊಡೆದಿದ್ದಾರೆ. ಇದರಿಂದ ಕಿವಿ ಹತ್ತಿರ ರಕ್ತ ಹೆಪ್ಪುಗಟ್ಟಿದೆ ಕಿವಿ ಒಳಗೆ ಬಾವು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈವರೆಗೂ ನನ್ನ ಮಗನಿಗೆ ತಲೆ ಸುತ್ತುತ್ತಿದೆ ಎನ್ನುತ್ತಿದ್ದಾನೆ. ಈ ರೀತಿ ಬೇರೆ ಮಕ್ಕಳಿಗೆ ಆಗಬಾರದು ಎಂದರು.

ಕಿರಣ ಶೇರಖಾನಿ ಪ.ಪಂ ಮಾಜಿ ಅಧ್ಯಕ್ಷ: ಕಳೆದ ಎರಡ್ಮೂರು ವರ್ಷಗಳ ಹಿಂದೆ ಇದೇ ಸಂಸ್ಥೆಯ ದೈಹಿಕ ಶಿಕ್ಷಕ ನನ್ನ ಅಕ್ಕನ ಮಗಳಿಗೆ ಹೊಡೆದಿದ್ದನು. ನಂತರ ಈ ಬಗ್ಗೆ ಸಂಸ್ಥೆಯ ಗಮನಕ್ಕೆ ತಂದಿದ್ದೆ ಈಗ ಮತ್ತೆ ವಿದ್ಯಾರ್ಥಿಗೆ ಹೊಡೆದಿದ್ದಾನೆ. ಹೀಗೆ ಮರ‍್ನಾಲ್ಕು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾನೆ. ಹಾಗಾಗಿ ಈ ಶಿಕ್ಷಕನನ್ನು ಸಂಸ್ಥೆಯವರು ತೆಗೆದುಹಾಕಬೇಕು.

ಜಕಣಾಚಾರಿ ಕ್ಷೇತ್ರಶಿಕ್ಷಣಾಧಿಕಾರಿ ಮುಂಡಗೋಡ: ಈ ಘಟನೆಯಿಂದಾಗಿ ಶಾಲೆಯಲ್ಲಿ ಸಂಸ್ಥೆಯ ಕಮಿಟಿಯವರ ಸಭೆ ಸೇರಿದ್ದರು ಈ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣವೇ ಶಾಲೆಗೆ ಬಂದು ವಿಚಾರಣೆ ಮಾಡಲಾಯಿತು. ವಿದ್ಯಾರ್ಥಿಗಳನ್ನು ದಂಡಿಸಿದರೇ ಏನಾಗುತ್ತದೆ ಎಂದು ಆ ಶಿಕ್ಷಕನಿಗೆ ಇಲಾಖೆಯ ಎಲ್ಲ ನಿಯಮಗಳ ಬಗ್ಗೆ ತಿಳಿಸಿದ್ದೇವೆ. ಆತ ಕ್ಷಮಾಪಣೆ ಸಹ ಕೇಳಿದ್ದಾನೆ. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ತಿಳಿಸಿದ್ದಾನೆ. ನಾನೊಬ್ಬ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಕಾನೂನಿನಲ್ಲಿ ಸಂಸ್ಥೆ ಮತ್ತು ಶಿಕ್ಷಕನಿಗೆ ಏನು ಕ್ರಮವಾಗುತ್ತದೆ ಎಂದು ತಿಳಿಸಿದ್ದೇವೆ. ದಂಡಿಸಿದ ಶಿಕ್ಷಕನಿಗೆ ಹಾಗೂ ಸಂಸ್ಥೆಗೆ ಶೋಕಾಸ ನೋಟೀಸ ಜಾರಿ ಮಾಡುತ್ತೇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!