Sunday, April 18, 2021

Latest Posts

ಶಾಲೆ ಶುಲ್ಕ ಪಾವತಿಸದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ

ದಿಗಂತ ವರದಿ ತುಮಕೂರು:

ಶಾಲೆಯ ಶುಲ್ಕ ಪಾವತಿಸಿಲ್ಲ ಎಂದು ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಹಿಂದಿ ಶಿಕ್ಷಕ ಮನಸೋಇಶ್ಚೆ ಥಳಿಸಿರುವ ಘಟನೆ ಪಾವಗಡದಲ್ಲಿ ನಡೆದಿದೆ.
ಪಾವಗಡದಲ್ಲಿ ವಿ.ಎಸ್.ಕಾನ್ವೆಂಟಿನಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿಯ ತಂದೆ ಇತ್ತೀಚೆಗೆ ಕೊವಿಡ್ ನಿಂದ ಮೃತರಾಗಿದ್ದು, ತಂದೆಯ ಸಾವಿನಿಂದ ಶುಲ್ಕ ಪಾವತಿಸಲಾಗಿಲ್ಲ.ಆದರೆ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶ್ವಥ್ ನಾರಾಯಣ ಮತ್ತು ಹಿಂದಿ ಶಿಕ್ಷಕ ರಾಮಕೃಷ್ಣ ನಾಯ್ಕ ಬಾಕಿ ಇರುವ 5000ರೂಗಳನ್ನು ಕೂಡಲೇ ಕಟ್ಟುವಂತೆ ಒತ್ತಡ ಹೇರಿದ್ದು ಹತ್ತನೆಯ ತರಗತಿಯ ವಿದ್ಯಾರ್ಥಿ ಮಹಮದ್ ಉಲ್ಲಾ ನಮ್ಮ ತಂದೆ ಕೊವಿಡ್ ನಿಂದ ಮೃತರಾಗಿದ್ದು. ಶುಲ್ಕ ಕಟ್ಟಲು ಕಷ್ಟವಾಗುತ್ತಿದೆ ಎಂದು ಹೇಳಿದರೂ ಕೇಳದ ಕಾರ್ಯದರ್ಶಿ ಮತ್ತು ಹಿಂದಿ ಶಿಕ್ಷಕ ವಿದ್ಯಾರ್ಥಿಯ ಸಹಪಾಠಿಗಳ ಮುಂದೆಯೇ ವಿದ್ಯಾರ್ಥಿಯ ಮೈಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ .ಅಪಮಾನಗೊಂಡ ವಿದ್ಯಾರ್ಥಿ ತನ್ನ ಮನೆಗೆ ತೆರಲಿ ಕೊಠಡಿಯ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು.ವಿಷಯ ತಿಳಿದ ಆತನ ಅಣ್ಣ ಕೊಠಡಿಯ ಬಾಗಿಲು ಹೊಡೆದು ತನ್ನ ತಮ್ಮನನ್ನು ರಕ್ಷಿಸಿದ್ದಾನೆ.
ವಿಷಯ ತಿಳಿದ ಪಾವಗಡದಲ್ಲಿ ಹಲವು ಜನಪರ ಸಂಘಟನೆಗಳು ವಿದ್ಯಾರ್ಥಿಯ ಪರವಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಹಿಂದಿ ಶಿಕ್ಷಕನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕೊವಿಡ್ ನಿಂದ ಮೃತರಾದವರ ಪುತ್ರ ಎಂದು ಸದರಿ ವಿದ್ಯಾರ್ಥಿ ಹೇಳಿದರು .ಮಾನವೀಯತೆಯ ಇಲ್ಲದೆ ಥಳಿಸಿರುವುದನ್ನು ನೋಡಿದರೆ. ಎಷ್ಷರ ಮಟ್ಟಿಗೆ ಇವರು ವಿದ್ಯಾರ್ಥಿಗಳನ್ನು ದೋಚುತ್ತಿದ್ದಾರೆ ಎಂಬುದು ಅರಿವಾಗುತ್ತದೆ ಎಂದಿರುವ ಸಂಘಟನೆಗಳ ಪ್ರತಿನಿಧಿಗಳು ಕೂಡಲೇ ಶಾಲೆಯನ್ನು ಮುಟ್ಟುವಂತೆ ಹಾಗೂ ಹಲ್ಲೆಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿನರವಾಗಿ ವೈ.ಎಸ್. ಎಫ್.ಸಂಘದ ಅಧ್ಯಕ್ಷರಾದ ಗಗನ್ ರಾಜ್. ಚಿನ್ಮಯಿ ಸಂಸ್ಥೆಯ ಸತ್ಯಲೋಕೇಶ್.ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಮೈಕೇಲ್ ನಾಡಾರ್.ಮಾನವಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಇಮ್ರಾನ್ ಉಲ್ಲಾ. ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್.ಜಯಕರ್ನಾಟಕ ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ರಫೀಕ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss