ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮೈಸೂರು:
ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾನುವಾರ ಭಾರತೀಯ ಜನತಾ ಪಾರ್ಟಿಯ ಶಿಕ್ಷಕರ ಪ್ರಕೊಷ್ಠದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ನಗರದ ಅನೇಕ ರಂಗಗಳಾದ ಕಲೆ, ವೈದ್ಯರು,ಕ್ರೀಡೆ,ಯೋಗ,ರಾಜಕೀಯ ದಲ್ಲಿ ಸೇವೆಸಲ್ಲಿಸಿದ ಶಿಕ್ಷಕರುಗಳಾದ ಸನ್ಮಾನ ಸ್ವೀಕರಿಸಿದ ಹಿರಿಯರುಗಳಾದ ಕೆ.ಎಂಮಹದೇವಯ್ಯ,ಡಾ ಗಜಾನನ ಹೆಗಡೆ, ಡಾ.ದಯಾನಂದ, ಸತ್ಯ ಪ್ರಸಾದ್, ಕಾಂತರಾಜು, ಹೇಮಣ್ಣ, ಡಾ.ಶಿವರಾಜಪ್ಪ, ಡಿ.ಕೆ.ಶಿನಿವಾಸ್, ಯೋಗ ಸಂಪತ್ ಅಚಾರ್, ಟಿ.ಮಲ್ಲಪ್ಪ, ಎಲ್.ಶ್ರೀಕಂಠ. ಆರ್.ಸತ್ಯ ನಾರಾಯಣ, ಹೆಚ್.ಎಲ್.ಶಿವಶಂಕರ್ ಸ್ವಾಮಿ, ಶಿವರಾಮಯ್ಯ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಸ್ತವಿಕವಾಗಿ ಮಾತನಾಡಿದ ಡಾ.ಎಲ್.ಶಿವರಾಜಪ್ಪ, ಗುರುಗಳು ಎಂದು ನೆನಪಿಗೆ ಬರುವುದು ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ,ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು. ಇವರುಗಳ ಆದರ್ಶ ನಮ್ಮೇಲ್ಲರ ಪ್ರೇರಣೆಯಾಗಲಿ ಎಂದರು. ಶಿಕ್ಷಣ ಕ್ಕೆ ಯಾವುದೇ ಜಾತಿ,ಧರ್ಮವಿಲ್ಲ. ಇದರಲ್ಲಿ ಇರುವುದು ಮಹಿಳೆ ಮತ್ತು ಪುರುಷ ಅಷ್ಟೇ. ಶಿಕ್ಷಣ ಕೇವಲ ವ್ಯಾಪಾರ,ಪ್ರಶಸ್ತಿಗಾಗಿ ಇರಬಾರದು. ಶಿಕ್ಷಣ ಅಂದರೆ ಬದುಕನ್ನು ಕಟ್ಟಿಕೊಳುವ ಶಿಕ್ಷಣವಾಗಬೇಕು ಹಾಗೇಯೆ ವ್ಯಕ್ತಿ ಮತ್ತು ವ್ಯಕ್ತಿತ್ವದ ನಿರ್ಮಾಣವಾಗಲಿ ಎಂದರು.
ವೇದಿಕೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀ ವತ್ಸ,ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಶಿಕ್ಷಕರ ಪ್ರಕೊಷ್ಟದ ಸಂಚಾಲಕ ಬಸವರಾಜಪ್ಪ,ರಾಜ್ಯ ಸದಸ್ಯ ಡಾ.ನಿರಂಜನ ಕುಮಾರ್,ಗಾಂಧಿ ಭವನ ನಿರ್ದೇಶಕ ಡಾ.ಶಿವರಾಜಪ್ಪ ,ಸಹ ಸಂಚಾಲಕ ವಾಸುದೇವ ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್,ನಗರ ಪಾಲಿಕೆ ಸದಸ್ಯರಾದ ವೇದಾವತಿ,ರೂಪ ಬಾಬಣ್ಣ,ಎಸ್ ಎನ್ ಶಿವಪ್ರಕಾಶ್, ಜಯ ಪ್ರಕಾಶ್, ಆಶಾ ನಾಗಭೂಷಣ,ವಾಣೀಶ್ ಕುಮಾರ್, ಜಯರಾಮ್, ಜೋಗಿಮಂಜು, ಚೇತನ್, ಸೋಮಶೇಖರ್, ಪೂರ್ಣಿಮಾ ಚಂದ್ರಪ್ಪ,ಸAತೋಷ್, ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.