Monday, August 15, 2022

Latest Posts

ಪ್ರೊಫೆಸರ್ ಆಗಿ ಬದಲಾದ ಟೀಂ ಇಂಡಿಯಾ ಕ್ರಿಕೆಟ್ ನಾಯಕ: ಕೋಹ್ಲಿ ಹೊಸ ಲುಕ್’ಗೆ ನೆಟ್ಟಿಗರು ಫಿದಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಟೀಂ ಇಂಡಿಯಾ ಕ್ರಿಕೆಟ್ ನಾಯಕ ವಿರಾಟ್ ಕೋಹ್ಲಿ ಫೋಟೋವೊಂದನ್ನು ‘ಮನಿ ಹೈಸ್ಟ್’ ವೆಬ್ ಸೀರೀಸ್’ನ ಫ್ರೊಫೆಸರ್ ಅಲ್ವರೋ ಮೋರ್ಟೆ ಮಾದರಿಯಲ್ಲಿಯೇ ಚಿತ್ರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ.

ವಿರಾಟ್​ ಕೋಹ್ಲಿ ಮತ್ತು ಅಲ್ವರೋ ಮೋರ್ಟೆ ಅವರ ಫೋಟೋಗಳನ್ನು ಅಕ್ಕ-ಪಕ್ಕ ಇಟ್ಟು ವೈರಲ್​ ಮಾಡಲಾಗುತ್ತಿದೆ. ವಿರಾಟ್​ ಕೋಹ್ಲಿ ಹೊಸ ಲುಕ್’ಗೆ ನೆಟ್ಟಿಗರು ಫಿದಾ ಆಗಿದ್ದು,  ಆದಷ್ಟು ಬೇಗ ಅವರು ನಟನೆಗೆ ಬರಬೇಕು ಎಂದು ಬಯಸುತ್ತಿದ್ದಾರೆ.

ವೈರಲ್ ಫೋಟೋದಲ್ಲಿ ವಿರಾಟ್ ಕೋಹ್ಲಿ ಕನ್ನಡಕ ಧರಿಸಿ, ಗಡ್ಡ, ಉದ್ದ ಕೂದಲು ಬಿಟ್ಟು ಥೇಟ್ ಫ್ರೊಫೆಸರ್ ಮಾದರಿಯಲ್ಲೇ ಕಾಣುತ್ತಿದ್ದಾರೆ.

ಏತನ್ಮಧ್ಯೆ ಜನಪ್ರಿಯ ಮನಿ ಹೈಸ್ಟ್ ವೆಬ್ ಸೀರೀಸ್ 5ನೇ ಮತ್ತು ಕೊನೆಯ ಭಾಗ ರಿಲೀಸ್ ಡೇಟ್ ಪ್ರಕಟವಾಗಿದ್ದು, ವಾಲ್ಯೂಮ್ ಒಂದು 2021 ಸೆಪ್ಟೆಂಬರ್ 3 ಹಾಗೂ ವಾಲ್ಯೂಮ್ 2 ಡಿಸೆಂಬರ್ 3  ಬಿಡುಗಡೆಯಾಗಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss