ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2023 ಟೂರ್ನಿಯಲ್ಲಿ ಇಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದಾರೆ. ಹೈವೋಲ್ಟೇಜ್ ಪಂದ್ಯಕ್ಕೆ ಟೀ ಇಂಡಿಯಾ ರೆಡಿಯಾಗಿದ್ದು, ಭಾರೀ ಸಿದ್ಧತೆ ನಡೆದಿದೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಅಭಿಮಾನಿಗಳು ಕಾತರರಾಗಿದ್ದಾರೆ.
ಈಗಾಗಲೇ ನೇಪಾಳ ವಿರುದ್ಧ ಗೆಲುವು ಸಾಧಿಸಿರುವ ಪಾಕಿಸ್ತಾನ ಗೆಲ್ಲುವ ಕಾನ್ಫಿಡೆನ್ಸ್‌ನಲ್ಲಿ ಮೈದಾನ ಪ್ರವೇಶಿಸಲಿದೆ, ಈ ಪಂದ್ಯ ಪಾಕ್ ಗೆದ್ದರೆ ಸೂಪರ್-4 ಹಂತಕ್ಕೆ ಕ್ವಾಲಿಫೈ ಆಗಲಿದೆ. ಇನ್ನು ಟೀಂ ಇಂಡಿಯಾಗೆ ಇದು ಮೊದಲ ಪಂದ್ಯವಾದ್ದರಿಂದ ತಂಡ ಜೋಶ್‌ನಲ್ಲಿದೆ. ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನವನ್ನು ಸೋಲಿಸಲು ಎಲ್ಲ ರೀತಿಯ ತಯಾರಿ ನಡೆಸಿದೆ.
ಟೀ ಇಂಡಿಯಾದ ಸ್ಟಾರ್ ಬ್ಯಾಟರ್ ಕೆ.ಎಲ್. ರಾಹುಲ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಾಗಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ವಲ್ಪ ಗೊಂದಲವಾಗಿದೆ. ಈ ಬಾರಿ ಇಶಾನ್ ಕಿಶನ್ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದಾರೆ.
ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ, ಹವಾಮಾನ ವರದಿ ಪ್ರಕಾರ ಪಲ್ಲೆಕೆಲೆಯಲ್ಲಿ ಶೇ.94ರಷ್ಟು ಮಳೆ ಬರುವ ಸಾಧ್ಯತೆ ಇದೆ, ಅದರಲ್ಲಿಯೂ ಶೇ. 27ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಳೆ ನಿಂತು ಹೋದಮೇಲೂ ಸಮಯ ಇದ್ದರೆ 20 ಓವರ್‌ಗಳ ಪಂದ್ಯ ನಡೆಯುವುದು, ಅದೂ ಆಗದೇ ಇದ್ದಲ್ಲಿ ಮತ್ತೊಂದು ದಿನ ಪಂದ್ಯ ನಡೆಯುವುದಿಲ್ಲ. ಬದಲಿಗೆ ಎರಡೂ ತಂಡಗಳಿಗೆ ಒಂದೊಂದು ಅಂಕ ನೀಡಲಾಗುವುದು.
ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.