ಟೀಮ್​ ಇಂಡಿಯಾದ ಆಟಗಾರ​ ಶಾರ್ದೂಲ್​ ಠಾಕೂರ್ ಮದುವೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಮ್ ಇಂಡಿಯಾದ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ.

ಕಳೆದ ವರ್ಷ ಮಿಥಾಲಿ ಪಾರೂಲ್ಕರ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಾರ್ದೂಲ್ ಅವರ ಮದುವೆ ದಿನಾಂಕ ಇದೀಗ ಹೊರಬಿದ್ದಿದೆ. ಅದರಂತೆ ಫೆಬ್ರವರಿ 27 ರಂದು ಮದುವೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

‘ಸದ್ಯ ಶಾರ್ದೂಲ್ ಅವರ ವೇಳಾಪಟ್ಟಿ ತುಂಬಾ ಬ್ಯುಸಿಯಾಗಿದ್ದು, ಅವರು ಫೆಬ್ರವರಿ 24 ರವರೆಗೆ ಕ್ರಿಕೆಟ್ ಆಡಲಿದ್ದಾರೆ. ನಂತರ ಫೆಬ್ರವರಿ 25 ರಿಂದ ಅವರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಫೆಬ್ರವರಿ 27ಕ್ಕೆ ತಾನು ಮತ್ತು ಶಾರ್ದೂಲ್ ಪರಸ್ಪರರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆ’ ಎಂದು ಮಿಥಾಲಿ ಪಾರೂಲ್ಕರ್‌ ಹೇಳಿದ್ದಾರೆ.

ಮುಂಬೈನಲ್ಲಿ ಮದುವೆ ಸಮಾರಂಭ ನಡೆಯಲ್ಲಿದ್ದು, ಸುಮಾರು 200 ರಿಂದ 250 ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಮಿಥಾಲಿ ಪಾರೂಲ್ಕರ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!