Sunday, March 26, 2023

Latest Posts

ತೃತೀಯ ಟೆಸ್ಟ್ ನಲ್ಲಿ ಎಡವಿದ ಟೀಮ್ ಇಂಡಿಯಾ: 47 ರನ್ ಮುನ್ನಡೆ ಸಾಧಿಸಿದ ಆಸಿಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆಸ್ಟ್ರೇಲಿಯಾ ವಿರುದ್ದದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎಡವಿದ್ದು, 109 ರನ್‌ಗೆ ಆಲೌಟ್ ಆಯಿತು.
ಬಳಿಕ ಬ್ಯಾಟಿಂಗ್ ಇಳಿದ ಆಸೀಸ್ ದಿಟ್ಟ ಹೋರಾಟ ನೀಡಿತು ದಿನಾದಾಟದ ಅಂತ್ಯದಲ್ಲಿ 47 ರನ್ ಮುನ್ನಡೆ ಪಡೆದುಕೊಂಡಿದೆ. ಸದ್ಯ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದೆ.

ಆಸ್ಟ್ರೇಲಿಯಾದ =ಟ್ರಾವಿಸ್ ಹೆಡ್ ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು.ಆದ್ರೆ ಮಾರ್ನಸ್ ಲಬುಶಾನೆ ಹಾಗೂ ಖವಾಜ ಜೊತೆಯಾಟ, ಭಾರತಕ್ಕೆ ಹಿನ್ನಡೆ ತಂದಿತು.

ಮಾರ್ನಸ್ ಲಬುಶಾನೆ 31 ರನ್ ಕಾಣಿಕೆ ನೀಡಿದರು. ಖವಾಜ 147 ಎಸೆತದಲ್ಲಿ 60 ರನ್ ಸಿಡಿಸಿ ಆಸ್ಟ್ರೇಲಿಯಾ ತಂಡದ ಆತಂಕ ದೂರ ಮಾಡಿದರು. ಇತ್ತ ನಾಯಕ ಸ್ಟೀವ್ ಸ್ಮಿತ್ ಹೋರಾಟವೂ ನೆರವಾಯಿತು.

ಸ್ಟೀವ್ ಸ್ಮಿತ್ 26 ರನ್ ಸಿಡಿಸಿ ಔಟಾದರು. ಪ್ರಮುಖ ನಾಲ್ಕು ವಿಕೆಟ್ ಕಬಳಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಪೀಟರ್ ಹ್ಯಾಂಡ್ಸ್‌ಕಾಂಬ್ ಹಾಗೂ ಕ್ಯಾಮರೂನ್ ಗ್ರೀನ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!