Saturday, August 13, 2022

Latest Posts

ಲಂಕಾ ತಂಡದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಭಾರತ ಮತ್ತು  ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿಯು ಆರಂಭವಾಗಲು ಕೆಲವೇ ದಿನಗಳು ಉಳಿದಿರುವಂತೆಯೆ ಲಂಕಾ ತಂಡದ ಸದಸ್ಯರೊಬ್ಬರಿಗೆ ಕೊರೋನಾ ವೈರಸ್ ತಗಲಿದೆ.
ಲಂಕಾ ತಂಡದ ಮಾಹಿತಿ ವಿಶ್ಲೇಷಕ ನಿರೋಶನ್ ಅವರಿಗೆ ಕೊರೋನಾ ಸೋಂಕು ತಗಲಿದ್ದರಿಂದ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಇಂಗ್ಲೆಂಡಿಗೆ ತೆರಳಿದ್ದ ಲಂಕಾ ತಂಡದ ಮೂವರು ಆಟಗಾರರು ಬಯೋಬಬಲ್ ಉಲ್ಲಂಘಿಸಿ ಮಾರುಕಟ್ಟೆಗೆ ಹೋದ ಕಾರಣಕ್ಕಾಗಿ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಆ ಬಳಿಕ ಇಂಗ್ಲೆಂಡಿನ ಏಳು ಮಂದಿ ಆಟಗಾರರಿಗೆ ಸೋಂಕು ತಗಲಿತ್ತು. ಇದೀಗ ಲಂಕಾದಲ್ಲೂ ತಂಡವು ಕೊರೋನಾ ಸೋಂಕಿಗೆ ಒಳಗಾಗಿರುವುದು ಅಲ್ಲಿಗೆ ತೆರಳಿರುವ ಭಾರತೀಯ ತಂಡಕ್ಕೆ ಆತಂಕ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss