ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿ ಊಟ ಖಾತ್ರಿಪಡಿಸುವ ಸಲುವಾಗಿ ಇಲ್ಲಿನ ಶಿಕ್ಷಕರಿಬ್ಬರು ತಮ್ಮ ಭುಜದ ಮೇಲೆ ಪಡಿತರ ಹೊತ್ತು 8 ಕಿಮೀ ನಡೆದಿರುವ ಘಟನೆ ಛತ್ತೀಸಗಢದ ಬಲರಾಂಪುರ ಹಳ್ಳಿಯ ನಡೆದಿದೆ.
ಹೌದು.. ಇಂತಹದೊಂದು ವಿದ್ಯಮಾನವನ್ನು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುಶೀಲ್ ಯಾದವ್ ಮತ್ತು ಪಂಕಜ್ ಎಂಬ ಬಲರಾಂಪುರ ಹಳ್ಳಿಯ ಶಿಕ್ಷಕರು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ಯ ಬಿಸಿ ಊಟ ನೀಡುವ ಉದ್ದೇಶದಿಂದ ಈ ಹರ ಸಾಹಸಕ್ಕೆ ಕೈ ಹಾಕಿದ್ದಾರೆ.
ಊಟ ತಯಾರಿಸಲು ಬೇಕಾಗುವ ದಿನಸಿಯನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಗುಡ್ಡ, ಹೊಳೆ ಎಂಬುದನ್ನು ಲೆಕ್ಕಿಸದೇ, 8 ಕಿಮೀ ನಡೆದು ಬಂದು ತಮ್ಮ ವಿದ್ಯಾರ್ಥಿಗಳ ಹೊಟ್ಟೆ ಚೀಲ ತುಂಬಿಸಿದ್ದಾರೆ.
“ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿ ವಾಹನಗಳಲ್ಲಿ ದಿನಸಿ ತೆಗೆದುಕೊಂಡು ಹೋಗುವುದು ಅಸಾಧ್ಯ. ಈಗಾಗಲೇ ಗ್ರಾಮಕ್ಕೆ ರಸ್ತೆ ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸಿಲಾಗಿದೆ” ಎಂದು ಶಾಲಾ ಶಿಕ್ಷಕರೊಬ್ಬರು ಹೇಳಿದ್ದಾರೆ.
“ನಮ್ಮ ಇಬ್ಬರು ಶಿಕ್ಷಕರಾದ ಸುಶೀಲ್ ಯಾದವ್ ಮತ್ತು ಪಂಕಜ್ ಅವರು ಪಿಡಿಎಸ್ ಅಂಗಡಿಯಿಂದ ದಿನಸಿಯನ್ನು ಹೊತ್ತುಕೊಂಡು ಗುಡ್ಡ,ಗಾಡು ಹಳ್ಳಿಯ ಶಾಲೆಗೆ ತೆಗೆದುಕೊಂಡು ಹೋಗುತ್ತಾರೆ. ಈ ಕಾರ್ಯಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ ಬಲರಾಂಪುರ ಜಿಲ್ಲಾ ಶಿಕ್ಷಣಾಧಿಕಾರಿ ಬಿ. ಎಕ್ಕಾ.
I've taken cognizance of this. Our 2 teachers Sushil Yadav & Pankaj are posted there. They carry the mid-day meal ration from the PDS shop and take it to the village school which is situated in the mountains. I salute them for this work: B Ekka, Balrampur Dist Education Officer pic.twitter.com/kHSibuji6w
— ANI (@ANI) October 24, 2021