ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಸದ್ದು ಮಾಡುತ್ತಿರುವ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಮತ್ತೊಂದು ಅಂಶ ಬೆಳಕಿಗೆ ಬಂದಿದೆ.
ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ನಿಮಿಷಗಳಿಗೂ ಮುಂಚೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್‌ಗೆ ಇ-ಮೇಲ್ ಕಳುಹಿಸಿದ್ದ ಎಂದು ಉನ್ನತ ಮೂಲಗಳು ತಿಳಿಸಿವೆ.
ಡಿಸೆಂಬರ್ 9ರಂದು ರಾತ್ರಿ 1 ಗಂಟೆ 31 ನಿಮಿಷದ ವೇಳೆಗೆ ʻನಿಮ್ಮ ಕೈಯಲ್ಲಿ ದೊಡ್ಡ ಅಧಿಕಾರ ಇದೆ, ಮನಸ್ಸು ಮಾಡಿದ್ರೆ ದೇಶದಲ್ಲಿ ಬದಲಾವಣೆ ತರ್ಬೋದು, ಅಸಮರ್ಥ ಮತ್ತು ಪಕ್ಷಪಾತಿ ನ್ಯಾಯಾಧೀಶರನ್ನು ವಜಾಗೊಳಿಸಬೇಕುʼ ಎಂದು ಉಲ್ಲೇಖಿಸಿ ಮೇಲ್ ಕಳುಹಿಸಿದ್ದಾನೆ. ಅಲ್ಲದೇ ತನ್ನ ಮೇಲೆ ಸುಳ್ಳು ಕೇಸ್, ಸೆಕ್ಷನ್‌ಗಳನ್ನ ಹಾಕಿದ್ದಾರೆಂದು ಎಂದು ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ರೀತಿಯ ಇ-ಮೇಲ್‌ವೊಂದನ್ನು ಸುಪ್ರೀಂ ಕೋರ್ಟ್ ಜಡ್ಜ್‌ಗೂ ಕಳುಹಿಸಿದ್ದಾರೆ ಅತುಲ್ ಎಂದು ತಿಳಿದುಬಂದಿದೆ.