ಟೇಕ್ ಆಫ್ ಆದ 15 ನಿಮಿಷದಲ್ಲೇ ತಾಂತ್ರಿಕ ದೋಷ: ಸಮುದ್ರ ತೀರದಲ್ಲಿ ನಿಂತ ಪ್ರಯಾಣಿಕರ ವಿಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೋಮಾಲಿಯಾದ ಮೊಗಾದಿಶು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡದೊಂದು ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಲಾದ ಪ್ರಯಾಣಿಕ ವಿಮಾನವೊಂದು ರನ್‌ವೇಯಿಂದ ಜಾರಿ ನೇರವಾಗಿ ಹಿಂದೂ ಮಹಾಸಾಗರದ ತೀರಕ್ಕೆ ನುಗ್ಗಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ಎಲ್ಲಾ 55 ಮಂದಿ ಸುರಕ್ಷಿತವಾಗಿದ್ದಾರೆ. ಸ್ಟಾರ್‌ಸ್ಕಿ ಏವಿಯೇಷನ್ ಸಂಸ್ಥೆಗೆ ಸೇರಿದ ಈ ವಿಮಾನವು ಮೊಗಾದಿಶುವಿನಿಂದ ಗಾಲ್ಕಸಿಯೊ ನಗರಕ್ಕೆ ತೆರಳುತ್ತಿತ್ತು. ವಿಮಾನ ಟೇಕ್ ಆಫ್ ಆದ ಕೇವಲ 15 ನಿಮಿಷಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ … Continue reading ಟೇಕ್ ಆಫ್ ಆದ 15 ನಿಮಿಷದಲ್ಲೇ ತಾಂತ್ರಿಕ ದೋಷ: ಸಮುದ್ರ ತೀರದಲ್ಲಿ ನಿಂತ ಪ್ರಯಾಣಿಕರ ವಿಮಾನ!