Monday, October 2, 2023

Latest Posts

ತೇಜಸ್ ಫೈಟರ್ ನಲ್ಲಿ ಅಸ್ತ್ರ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶೀಯ ಲಘು ಯುದ್ಧವಿಮಾನ ತೇಜಸ್ ಇಂದು ದೃಶ್ಯ ವ್ಯಾಪ್ತಿಯ ಆಚೆಗಿನ ಎಎಎಂ ( air-to-air missile) ನ್ನು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದೆ.

ಗೋವಾದ ಕಡಲ ಪ್ರದೇಶದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆದಿದೆ. ಸುಮಾರು 20,000 ಅಡಿ ಎತ್ತರದಲ್ಲಿ ವಿಮಾನದಿಂದ ಕ್ಷಿಪಣಿ ಬಿಡುಗಡೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೇಜಸ್, ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಎಲ್ಎಸ್ಪಿ-7 ಆಗಸ್ಟ್ 23 ರಂದು ಗೋವಾದ ಕರಾವಳಿಯಲ್ಲಿ ದೃಷ್ಟಿಗೋಚರ ವ್ಯಾಪ್ತಿಯಿಂದ ಆಚೆಗೆ ಅಸ್ತ್ರ ಎಂಬ ಸ್ವದೇಶಿ ಕ್ಷಿಪಣಿಯನ್ನು ಯಶಸ್ವಿಯಾಗಿ ಹಾರಿಸಿತುಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ತೇಜಸ್-ಎಲ್ಸಿಎಯಿಂದ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಡಿಎ, ಡಿಆರ್ಡಿಒ, ಸಿಮಿಲಾಕ್, ಡಿಜಿ-ಎಕ್ಯೂಎ ಮತ್ತು ಉದ್ಯಮವನ್ನು ಶ್ಲಾಘಿಸಿದರು.

ಈ ಉಡಾವಣೆ ತೇಜಸ್ನ ಯುದ್ಧ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಸಚಿವರು ಹೇಳಿದ್ದಾರೆ.

ತೇಜಸ್ ಏಕ-ಎಂಜಿನ್ ಬಹು-ಪಾತ್ರದ ಯುದ್ಧ ವಿಮಾನವಾಗಿದ್ದು, ವಾಯು ರಕ್ಷಣೆ, ಕಡಲ ವಿಚಕ್ಷಣ ಮತ್ತು ಸ್ಟ್ರೈಕ್ ಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!