Wednesday, August 10, 2022

Latest Posts

ತೆಲಂಗಾಣದಲ್ಲಿ ಪ್ರವಾಹ ಬಂದಿದ್ದಕ್ಕೂ ಮುಖ್ಯಮಂತ್ರಿಯನ್ನು ಹೊಗಳಿದ ಸಚಿವ!

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಾರಂಗಲ್ ಸೇರಿದಂತೆ ತೆಲಂಗಾಣದ ಹಲವು ಜಿಲ್ಲೆಗಳು ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿವೆ. ಅನೇಕ ಬುಡಕಟ್ಟು ಪ್ರಾಂತ್ಯಗಳು ಸಂಪರ್ಕವನ್ನೇ ಕಳೆದುಕೊಂಡಿವೆ.

ಹೀಗೆ ಪ್ರವಾಹದ ಹೊಡೆತ ಎದುರಿಸುತ್ತಿರುವುದು ಕೇವಲ ತೆಲಂಗಾಣವೇನಲ್ಲ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ಸಮಸ್ಯೆ ಅನುಭವಿಸಿವೆ. ಆದರೆ ಇಂಥ ಸೂಕ್ಷ್ಮ ಸಂದರ್ಭದಲ್ಲಿ ಆಡಳಿತ ವರ್ಗ ತನ್ನ ಮಾತು ಮತ್ತು ನಡತೆಯಲ್ಲಿ ಸಂವೇದನೆ ಮೆರೆಯುವುದು ಬಹಳ ಮುಖ್ಯವಾಗಿರುತ್ತದೆ.

ಆದರೆ, ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಹೋದ ತೆಲಂಗಾಣ ರಾಷ್ಟ್ರೀಯ ಸಮಿತಿ ಸರ್ಕಾರದ ಸಚಿವರೊಬ್ಬರು ತಮ್ಮ ಮಾತುಗಳಿಗೆ ಭಾರಿ ಟೀಕೆ ಎದುರಿಸುತ್ತಿದ್ದಾರೆ. ಏಕೆಂದರೆ ಸಂಕಷ್ಟದ ಸಮಯವನ್ನೂ ಜನರ ಸಾಂತ್ವಾನಕ್ಕೆ ಉಪಯೋಗಿಸದೇ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರನ್ನು ಹೊಗಳುವುದಕ್ಕೆ ಬಳಸಿಕೊಂಡರು ಈ ಸಚಿವ.

ಸಚಿವ ಗಂಗುಲಾ ಕಮಲಾಕರ ಹೇಳಿದ್ದು- ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಕೆಸಿಆರ್ ಅವರ ಸಮರ್ಥ ಕಾರ್ಯಗಳಿಂದ ಭೂಮಿಗೆ ನೀರಿಂಗುವ ಪ್ರಮಾಣ ಹೆಚ್ಚಿಗೆಯಾಗಿದೆಯಲ್ಲದೇ ಎಲ್ಲ ಜಲಾಶಯಗಳೂ ತುಂಬುವಂತಾಗಿದೆ. ಹೀಗಾಗಿ ಮಳೆ ಬಂದಕೂಡಲೇ ಕರೀಂನಗರ ಸೇರಿದಂತೆ ಹಲವು ಭಾಗಗಳಲ್ಲಿ ನೀರು ಹೆಚ್ಚಾಗಿ ಪ್ರವಾಹ ಉಂಟಾಗಿದೆ. ಅಂತರ್ಜಲ ಮಟ್ಟ ಏರಿಸುವುದರಲ್ಲಿ ಯಶ ಕಂಡಿರುವುದನ್ನು ನಾವು ಗುರುತಿಸಬೇಕು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss