ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈಗ ಬಹಳ ಸದ್ದು ಮಾಡ್ತಿದೆ ರಾಜು ಮುಪ್ಪರುಪ್ಪ ಕೈಯಲ್ಲಿ ಪೆನ್ ಆಗಿ ಅರಳುವ ಜೋಳ!

  •  ಹಿತೈಷಿ

ಕಳೆದ ದಶಕಗಳಿಂದ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ ಪೆನ್ ಗಳದ್ದೇ ಕಾರುಬಾರು. ಅವುಗಳಲ್ಲಿ Use & Throw ಪೆನ್ ಗಳೇ ಹೆಚ್ಚು. ಒಮ್ಮೆ ರೀಫಿಲ್ ನಲ್ಲಿ ಇಂಕ್ ಖಾಲಿಯಾದರೆ ಮುಗೀತು. ಅದನ್ನೆತ್ತಿ ತೊಟ್ಟಿಗೆ ಅಥವಾ ರಸ್ತೆಗೆ ಎಸಿಯೋದು ಮಾಮೂಲಿಯಾಗಿಬಿಟ್ಟಿದೆ. ಈ ಪ್ಲಾಸ್ಟಿಕ್ ಕಸ ಕಡಿಮೆ ಮಾಡೋಕೆ ಎಷ್ಟೋ ಮಂದಿ ಪರಿಸರ ಸ್ನೇಹಿ ಪೆನ್ ಗಳನ್ನು ಪರಿಚಯಿಸಿದ್ದಾರೆ. ಅಂತವರ ಪೈಕಿ ರಾಜು ಮುಪ್ಪರುಪ್ಪ ಕೂಡ ಒಬ್ಬರು.

ಯಾರಿವರು?
ಇವರು ತೆಲಂಗಾಣದ ವಾರಂಗಲ್ಸ್ ಗೋಪಾಲಪುರಂ ಹಳ್ಳಿಯವರು. ರಾಜು ಅವರಲ್ಲೊಂದು ವಿಶೇಷವಾದ ಕಲೆ ಇದೆ. ಇವರು ಕಡಿಮೆ ಬಜೆಟ್ ನಲ್ಲಿ ಬೀದಿ ದೀಪಗಳಿಗೆ ಸೆನ್ಸಾರ್ ಅಳವಡಿಸೋದು, ಬ್ಯಾಟರಿ ನಿರ್ಮಿತ ಸೈಕಲ್ ಗಳನ್ನು ತಯಾರಿಸುತ್ತಾರೆ. ಇವರು ಇದೀಗ ಪರಿಸರ ಸ್ನೇಹಿ ಪೆನ್ ನ ಉತ್ಪಾದನೆ ಶುರು ಮಾಡಿರುವುದು ಎಲ್ಲರಿಗೂ ಮಾದರಿಯಾಗಿದೆ.

Image

ಆರಂಭ ಹೇಗೆ?
ಅದೊಂದು ದಿನ ಜೋಳ ಬೆಳೆದ ನಂತರ ಅದರ ಹೊರಗಿನ ಸಿಪ್ಪೆಯನ್ನು ತೆಗೆದು ಜೋಳವನ್ನು ಮಾರುಕಟ್ಟೆ ಕಳುಹಿಸುತ್ತಿದುದ್ದನ್ನು ಕಂಡ ರಾಜು. ಯಾವುದಕ್ಕೂ ಬಳಕೆಯಾಗದ ಸಿಪ್ಪೆಯನ್ನು ಸುಡುವುದರ ಬದಲು ಅದನ್ನು ಬಳಸುವ ನಿಟ್ಟಿನಲ್ಲಿ ಹೊಸ ಆವಿಕ್ಷಾರಕ್ಕೆ ಮುಂದಾದರು.

eco-friendly pens from corn husk

ಏನು ಸಾಧನೆ?
ಈ ಜೋಳದ ಸಿಪ್ಪೆಗಳನ್ನು ತಮ್ಮ ಮನೆಗೆ ತಂದು ಕೈನಲ್ಲಿಯೇ ಅದನ್ನು ಚಪ್ಪಟೆಯಾಗಿ ಮಾಡಿದರು. ಬಳಿಕ ಅವರ ಬಳಿ ಇದ್ದ ಲೋಹದ ರಾಡ್ ನ ಮೂಲಕ ಅದನ್ನು ಸಿಲಿಂಡರ್ ಅಚ್ಚಾಗಿ ಮಾಡಿ ಪೆನ್ ಒಂದನ್ನು ಸಿದ್ಧ ಮಾಡಿದರು. ಆ ಪೆನ್ ನ ಒಳಗೆ ರೀಫಿಲ್ ಹಾಕಿ, ಮತ್ತೊಂದು ತುದಿಗೆ ಸಣ್ಣ ಹೊಟ್ಟನ್ನು ಫಿಕ್ಸ್ ಮಾಡಿದರು.

These Sustainable Pens Are Made From Dried Corn Husk Waste

ತಮ್ಮ ಮೊದಲ ಪೆನ್ನಿನಲ್ಲಿ ತಾವೇ ಮೊದಲು ಬರೆದರು. ಈ ಪೆನ್ ನಲ್ಲಿ ಕೂಡ ಎಲ್ಲಾ ಪೆನ್ ಗಳಂತೆ ಬರೆಯಬಹುದು. ಯಾವುದೇ ಸಮಸ್ಯೆ ಆಗೋದಿಲ್ಲ ಎಂಬುದನ್ನು ತಿಳಿದುಕೊಂಡರು.

ವ್ಯಾಪಾರ ಹೇಗೆ?
ರಾಜು ತಮ್ಮ ಮೊದಲ ಕಂತಿನ ಪೆನ್ ಗಳನ್ನು ತಮ್ಮ ಹಳ್ಳಿಯಲ್ಲಿನ ಜನರಿಗೆ ಹಂಚಿದರು. ಈ ಪೆನ್ ಗಳನ್ನು ತಾವೇ ಸ್ವತಃ ತಯಾರಿಸುತ್ತಿದ್ದು, ಒಂದು ಪೆನ್ನು ತಯಾರಿಸಲು 10 ನಿಮಿಷ ಬೇಕಾಗುತ್ತೆ ಎನ್ನುತ್ತಾರೆ ರಾಜು.

Image

ವಾರಂಗಲ್ ಗ್ರೇಟರ್ ಮುನ್ಸಿಪಲ್ ಕಾರ್ಪೊರೇಶನ್ ಕಮಿಷನರ್ ಐಎಎಸ್ ಪಮೇಲಾ ಸತ್ಪತಿ ಅವರನ್ನು ಭೇಟಿಯಾಗಿ ಅವರಿಗೆ ಈ ವಿಶೇಷ ಪರಿಸರ ಸ್ನೇಹಿ ಪೆನ್ನನ್ನು ಉಡುಗೊರೆಯಾಗಿ ಕೊಟ್ಟರು. ವಿಶೇಷ ಆವಿಷ್ಕಾರದ ಬಗ್ಗೆ ಆಸಕ್ತಿ ಹೊಂದಿದ್ದ ಪಮೇಲಾ ಅವರು ಪೆನ್ ಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಇಂಕ್ ಗಳನ್ನು ಬಳಸೋದಕ್ಕೆ ಒಪ್ಪಿದ ಬಳಿಕ ರಾಜು ಅವರಿಗೆ 1,000 ಪೆನ್ ಗಳ ಬೇಡಿಕೆ ಇಟ್ಟರು.

ತೆಲಂಗಾಣ ಸ್ಟೇಟ್ ಇನ್ನೋವೇಶನ್ ಸೆಲ್ (ಟಿಎಸ್‌ಐಸಿ) ರಾಜು ಅವರ ಪ್ರಯತ್ನಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದು, ಈ ಬಳಿಕ ರಾಜು ಅವರ ಪೆನ್ ಗೆ ಹೆಚ್ಚಿನ ಬೇಡಿಕೆಗಳು ಬರುತ್ತಿವೆ.

ಈ ವಿಭಿನ್ನ ಆವಿಷ್ಕಾರದ ಬಳಕೆಯಿಂದ ಪ್ಲ್ಯಾಸ್ಟಿಕ್ ಪೆನ್ನುಗಳಿಂದ ಉತ್ಪತ್ತಿಯಾಗುವ 1.6 ಬಿಲಿಯನ್ ತ್ಯಾಜ್ಯ ಕಡಿಮೆ ಮಾಡಲು ಸಹಾಯವಾಗುತ್ತದೆ ಎನ್ನುತ್ತಾರೆ ರಾಜು. ನಾವು ಇವರೊಂದಿಗೆ ಸೇರಿ ಪರಿಸರ ಉಳಿಸಲು ಕೈ ಜೋಡಿಸೋಣ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss