Monday, July 4, 2022

Latest Posts

ಮೊದಲ ಬಾರಿಗೆ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ತಲುಪಿಸಲು ಮುಂದಾದ ತೆಲಂಗಾಣ!

ಹೊಸದಿಗಂತ ಆನ್‌ಲೈನ್‌ನ ವಿನಮ್ರ ವಿನಂತಿ…
ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………………………. 

ಹೊಸದಿಗಂತ ಆನ್ ಲೈನ್ ಡೆಸ್ಕ್:

ತೆಲಂಗಾಣದಲ್ಲಿ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ತಲುಪಿಸುವುದಕ್ಕೆ ಅನುಮತಿ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಡ್ರೋಣ್ ಮೂಲಕ ಲಸಿಕೆ ತಲುಪಿಸುವ ವ್ಯವಸ್ಥೆಗೆ ಅನುಮತಿ ಕೋರಿದೆ.
ಅನುಮತಿ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ವಿಮಾನಯಾನ ಸಚಿವಾಲಯ ‘ಮಾನವರಹಿತ ವಿಮಾನ ವ್ಯವಸ್ಥೆ ನಿಯಮ 2021 ರ ಅನ್ವಯ, ತೆಲಂಗಾಣ ಸರ್ಕಾರಕ್ಕೆ ಪ್ರಾಯೋಗಿಕವಾಗಿ ವಿಎಲ್‌ಒಎಸ್ ನ ವ್ಯಾಪ್ತಿಯಲ್ಲಿ ಡ್ರೋಣ್ ಮೂಲಕ ಲಸಿಕೆ ತಲುಪಿಸುವುದಕ್ಕೆ ಅನುಮತಿ ನೀಡಲಾಗಿದೆ’ ಎಂದು ಹೇಳಿದೆ.
45 ವಯಸ್ಸಿನ 1 ಕೋಟಿ ಮಂದಿಗೆ ಮಾ.09 ರಂದು ಡ್ರೋಣ್ ಮೂಲಕ ಲಸಿಕೆ ತಲುಪಿಸುವುದಕ್ಕೆ ಸಚಿವಾಲಯದಿಂದ ಯುಎಎಸ್ ನಿಯಮಗಳ ಸಡಿಲಿಕೆಗೆ ತೆಲಂಗಾಣ ಸರ್ಕಾರ ಮನವಿ ಮಾಡಿತ್ತು. ಒಂದು ವರ್ಷಗಳ ಕಾಲ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ವಿಷ್ಯುಯಲ್ ರೇಂಜ್ ನಲ್ಲಿ ಬಳಕೆ ಮಾಡಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss