ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಡ್ರೋನ್ ಗಳನ್ನು ಸಾಮಾನ್ಯವಾಗಿ ಫೋಟೋ, ವೀಡಿಯೋ ತೆಗೆಯೋದಕ್ಕೆ ಬಳಸೋದನ್ನ ನೋಡಿರುತ್ತೇವೆ. ಆದರೆ ಈಗ ತೆಲಂಗಾಣ ಸರ್ಕಾರ ಡ್ರೋನ್ ಗಳ ಮೂಲಕ ಔಷಧ, ಲಸಿಕೆಗಳನ್ನು ರವಾನಿಸಲು ಮುಂದಾಗಿದೆ.
ಹೌದು, ತೆಲಂಗಾಣ ಸರ್ಕಾರ ‘ಮೆಡಿಸಿನ್ ಫ್ರಂ ದಿ ಸ್ಕೈ’ ಯೋಜನೆ ಅಡಿಯಲ್ಲಿ ದೂರದ ಪ್ರದೇಶಗಳಿಗೆ ಔಷಧಗಳು, ಲಸಿಕೆಗಳು, ರಕ್ತದ ಘಟಕಗಳು, ರೋಗನಿರ್ಣಯದ ಮಾದರಿಗಳು ಮತ್ತು ಇತರ ವೈದ್ಯಕೀಯ ಸಾಧನಗಳನ್ನು ತಲುಪಿಸಲು ನಿಯೋಜಿಸಲಾಗಿದೆ.
ನಾಗರೀಕ ವಿಮಾನಯಾನ ಸಚಿವಾಲಯದ ಅನುಮೋದನನೆಯೊಂದಿಗೆ ಸರ್ಕಾರ ಈ ಯೋಜನೆಯನ್ನು ಇಂದು ಪ್ರಾರಂಭಿಸಲಿದೆ. ಲಸಿಕೆ, ಔಷಧ ಪೂರೈಕೆಯನ್ನು ಮೊದಲು ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಿಂದ ಆರಂಭಿಸಲಿದೆ.
ಜಿಲ್ಲೆಯಲ್ಲಿ ಗುರುತಿಸಲಾದ ಪ್ರದೇಶವನ್ನು ಬಳಸಿಕೊಂಡು ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಪೇಲೋಡ್ಗಳನ್ನು ಸಾಗಿಸಲು ವಿಷುಯಲ್ ಲೈನ್ ಆಫ್ ಸೈಟ್ (BVLOS) ಡ್ರೋನ್ ವಿಮಾನಗಳನ್ನು ಬಳಸಲಾಗುತ್ತದೆ.
ಈ ಯೋಜನೆಯನ್ನು ತೆಲಂಗಾಣದ ಐಟಿ ವಿಭಾಗದ ಎಮರ್ಜಿಂಗ್ ಟೆಕ್ನಾಲಜೀಸ್ ವಿಂಗ್ ನೇತೃತ್ವ ವಹಿಸಿದೆ. ಇಲಾಖೆಯು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್), ನೀತಿ ಆಯೋಗ, ಮತ್ತು ಹೆಲ್ತ್ ನೆಟ್ ಗ್ಲೋಬಲ್ (ಅಪೊಲೊ ಆಸ್ಪತ್ರೆಗಳು) ಜೊತೆ ಪಾಲುದಾರಿಕೆ ಹೊಂದಿದೆ. ಈ ಯೋಜನೆಗೆ ಬಳಸುತ್ತಿರುವ ಪ್ರಸ್ತುತ ಡ್ರೋನ್ಗಳು 20 ಕಿಲೋಮೀಟರ್ ದೂರದ ಪ್ರದೇಶ ತಲುಪಲಿದೆ.
ಒಂದು ಟ್ರಿಪ್ನಲ್ಲಿ ಸುಮಾರು 5,000 ಡೋಸ್ ಲಸಿಕೆಗಳನ್ನು ರವಾನಿಸಬಹುದಾಗಿದ್ದು, ಎರಡು ಡ್ರೋನ್ಗಳ ಮೂಲಕ ತಲಾ 10 ಟ್ರಿಪ್ಗಳಂತೆ ಮಾಡಿದರೆ, ಒಂದು ದಿನದಲ್ಲಿ 50,000 ಡೋಸ್ ಲಸಿಕೆಗಳನ್ನು ರವಾನಿಸಬಹುದಾಗಿದೆ ಎಂದು ತೆಲಂಗಾಣದ ಐಟಿ ಇಲಾಖೆ ತಿಳಿಸಿದೆ.