ಟ್ರಾಯ್ ಎಚ್ಚರಿಕೆ: 30 ದಿನಗಳ ವ್ಯಾಲಿಟಿಡಿಯ ಹೊಸ ಪ್ಲಾನ್ ಘೋಷಿಸಿದ ಟೆಲಿಕಾಂ ಕಂಪನಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಲಿಕಾಂ ಕಂಪೆನಿಗಳು ವ್ಯಾಟಿಲಿಡಿ ಪ್ಲಾನ್ ಗಳನ್ನು ಗರಿಷ್ಠ 30 ದಿನಗಳನ್ನು ನೀಡಬೇಕೆಂಬ ಟ್ರಾಯ್ ಎಚ್ಚರಿಕೆ ಬೆನ್ನಲ್ಲೇ ಏರ್‌ಟೆಲ್, ಜಿಯೋ ಸೇರಿದಂತೆ ಭಾರತದ ಟೆಲಿಕಾಂ ಸರ್ವೀಸ್ ಕಂಪನಿಗಳು 30 ದಿನ ವ್ಯಾಲಿಡಿಟಿಯ ಹೊಸ ಪ್ಲಾನ್ ಘೋಷಿಸಿದೆ.

ಈ ಹಿಂದೆ ಪ್ರತಿ ತಿಂಗಳ ಮೊಬೈಲ್ ರೀಚಾರ್ಜ್ ರೀಚಾರ್ಜ್ ಮಾಡಿದರೆ ದಿನಗಳ ಸಂಖ್ಯೆ 24, 26 ಅಥವಾ ಗರಿಷ್ಠ 28 ದಿನ ಮಾತ್ರ. ಈ ಕುರಿತು ಗ್ರಾಹಕರು ಹಲವು ದೂರುಗಳನ್ನು ನೀಡಿದ್ದಾರೆ. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಟೆಲಿಕಾಂ ರೆಗ್ಯೂಲೇಟರ್ ಆಥಾರಿಟಿ ಆಫ್ ಇಂಡಿಯಾ ಟೆಲಿಕಾಂ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ. ಕನಿಷ್ಠ ವ್ಯಾಲಿಟಿಡಿಯನ್ನು 30 ದಿನ ನೀಡಬೇಕು. ಪ್ರತಿ ಟೆಲಿಕಾಂ ಕಂಪನಿ ಕನಿಷ್ಠ ಒಂದು ಪ್ಲಾನ್ ವೌಚರ್, ಸ್ಪೆಷಲ್ ಟಾರಿಫ್ ವೌಚರ್ ಹಾಗೂ ಕೊಂಬೋ ವೌಚರ್ ಅವಧಿಯನ್ನು ಕನಿಷ್ಠ 30 ದಿನ ನೀಡಬೇಕು.

ಗ್ರಾಹಕರು ಈ ತಿಂಗಳು ರಿಚಾರ್ಜ್ ಮಾಡಿದರೆ ಮುಂದಿನ ತಿಂಗಳು ಅದೆ ಸಮಯಕ್ಕೆ ರೀಚಾರ್ಜ್ ಮಾಡುವಂತಿರಬೇಕು. ಈ ರೀಚಾರ್ಜ್ ಪ್ಲಾನ್ ಪ್ರತಿ ತಿಂಗಳು ಇರಬೇಕು. ಗ್ರಾಹಕರು ಯಾವುದೇ ಸಮಸ್ಯೆ ಇಲ್ಲದ 30 ದಿನಗಳ ವ್ಯಾಲಿಟಿಡಿ ಪ್ಲಾನ್ ರೀಚಾರ್ಜ್ ಮಾಡುವಂತಿರಬೇಕು ಎಂದು ಟ್ರಾಯ್ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇಟೆಲಿಕಾಂ ಸರ್ವೀಸ್ ಕಂಪನಿಗಳು 30 ದಿನ ವ್ಯಾಲಿಡಿಟಿಯ ಹೊಸ ಪ್ಲಾನ್ ಘೋಷಿಸಿದೆ.

ಜಿಯೋ:
30 ದಿನ ಪ್ಲಾನ್ ವೌಚರ್; 296 ರೂಪಾಯಿ, ಇದೇ ಪ್ಲಾನ್ ಮುಂದಿನ ತಿಂಗಳು ರಿಚಾರ್ಜ್ ಮಾಡಲು 259 ರೂಪಾಯಿ

ಏರ್‌ಟೆಲ್:
30 ದಿನದ ವ್ಯಾಲಿಡಿಟಿ ವೌಚರ್ ಬೆಲೆ 128 ರೂಪಾಯಿ, ಇದೇ ಪ್ಲಾನ್ ಮುಂದುವರಿಸಲು ಮುಂದಿನ ತಿಂಗಳು 131 ರೂಪಾಯಿ

ವೋಡಾಫೋನ್ ಐಡಿಯಾ
30 ದಿನದ ವ್ಯಾಲಿಡಿಟಿ ವೌಚರ್ ಬೆಲೆ 137 ರೂಪಾಯಿ, ಮುಂದಿನ ತಿಂಗಳು ಇದೇ ಪ್ಲಾನ್ ಮುಂದುವರಿಸಲು ರೀಚಾರ್ಜ್ ಬೆಲೆ 141 ರೂಪಾಯಿ

ಬಿಎಸ್ಎನ್ಎಲ್
30 ದಿನದ ವ್ಯಾಲಿಡಿಟಿ ವೌಚರ್ ಬೆಲೆ 199 ರೂಪಾಯಿ, ಇದೇ ಪ್ಲಾನ್ ಮತ್ತೆ ಮುಂದುವರಿಸಲು ಬೆಲೆ 229 ರೂಪಾಯಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!