spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟೆಲಿಕಾಂ ರೀಚಾರ್ಜ್, ವಾಹನೋದ್ದಿಮೆಗೆ ಉತ್ತೇಜನದ ಚಾರ್ಜ್ – ಸಂಪುಟ ನಿರ್ಧಾರದ ಸಾರಾಂಶ

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್:

ಜಿಯೊ ಬಿಟ್ಟರೆ ಉಳಿದೆಲ್ಲ ಟೆಲಿಕಾಂ ಕಂಪನಿಗಳು ಸಾಲದ ಭಾರದಲ್ಲಿ ಮುಳುಗಿವೆ. ವಾಹನ ಕಂಪನಿಗಳು ಜಾಗತಿಕವಾಗಿಯೇ ನಿಧಾನಗತಿ ಪ್ರಕ್ರಿಯೆಗೆ ಒಳಗಾಗಿವೆ. ಇವೆರಡು ಭಾರತದ ಅರ್ಥವ್ಯವಸ್ಥೆಯಲ್ಲಿ ಮೊಳಗುತ್ತಿದ್ದ ಆತಂಕಗಳು. ಬುಧವಾರದ ಕೇಂದ್ರ ಸಂಪುಟ ನಿರ್ಣಯಗಳು ಇವೆರಡೂ ಪ್ರಮುಖ ಸಮಸ್ಯೆಗಳಿಗೆ ತುಸು ನಿರಾಳವನ್ನು ಒದಗಿಸಿವೆ.

ಮೊದಲನೆಯದಾಗಿ ಟೆಲಿಕಾಂ ವಲಯದಲ್ಲಿ ಭಾರ್ತಿ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾಗಳು ಶುಲ್ಕ ಪಾವತಿ ಮಾಡದಿದ್ದರೆ ದಿವಾಳಿ ಘೋಷಿಸಬೇಕು ಎಂಬ ಹಂತದಲ್ಲಿ ಪರಿಸ್ಥಿತಿ ಇತ್ತು. ಈಗ ಸರ್ಕಾರದ ನಿರ್ಧಾರವು ಇವರ ಬಾಕಿ ಉಳಿದ ಶುಲ್ಕ ಪಾವತಿ ಅವಧಿಯನ್ನು ನಾಲ್ಕು ವರ್ಷಗಳಿಗೆ ಮುಂದೂಡಿದೆ. ಅಲ್ಲದೇ, ದೂರಸಂಪರ್ಕ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ಹೂಡಿಕೆಗೂ ಅನುಮತಿ ನೀಡಿದೆ. ಇದು ಕಷ್ಟದಲ್ಲಿರುವ ಕ್ಷೇತ್ರಕ್ಕೆ ಹಣ ಹರಿದುಬರುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಎರಡನೆಯದಾಗಿ, ವಾಹನೋದ್ದಿಮೆ ಕ್ಷೇತ್ರಕ್ಕೆ ‘ಉತ್ಪಾದನೆ ಆಧರಿತ ಉತ್ತೇಜನ’ (ಪಿ ಎಲ್ ಐ) ಯೋಜನೆಯನ್ನು ಸರ್ಕಾರ ಘೋಷಿಸಿದೆ. ಈ ಹಿಂದೆಯೂ ಜವಳಿ, ಔಷಧೋದ್ಯಮ, ಎಲೆಕ್ಟ್ರಾನಿಕ್ ಇತ್ಯಾದಿ ಕ್ಷೇತ್ರಗಳಲ್ಲಿ ಸರ್ಕಾರ ಈ ಯೋಜನೆಯನ್ನು ಘೋಷಿಸಿತ್ತು. ಯಾವುದೇ ಉತ್ಪಾದನೆ ಆಧರಿತ ಉತ್ತೇಜನ ಕಾರ್ಯನಿರ್ವಹಿಸುವುದು ಹೀಗೆ- ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಿಗೆ ಹೂಡಿಕೆ ಮತ್ತು ಉತ್ಪಾದನೆಗಳು ಎಷ್ಟರಮಟ್ಟಿಗೆ ಹೆಚ್ಚಾಗಬೇಕು ಎಂದು ಮಿತಿಯೊಂದನ್ನು ನಿಗದಿಪಡಿಸಿ ಅದನ್ನು ತೋರಿದ ಕಂಪನಿಗಳಿಗೆ ತೆರಿಗೆ ವಿನಾಯ್ತಿ ಇತ್ಯಾದಿಗಳ ರೂಪದಲ್ಲಿ ಹಣಕಾಸು ಉತ್ತೇಜನವನ್ನು ಖಾತ್ರಿಪಡಿಸುತ್ತದೆ.

ಈಗ ಪಿ ಎಲ್ ಐ ಘೋಷಣೆಯಾಗಿರುವ ವಾಹನೋದ್ದಿಮೆ ಕ್ಷೇತ್ರವನ್ನು ಗಮನಿಸುವುದಾದರೆ ಅದರ ಸಾರಾಂಶ ಹೀಗಿದೆ: ಉತ್ತೇಜನದ ಮೊತ್ತ ರು. 26,058 ಕೋಟಿ. ಇದು ವಾಹನ ತಯಾರಕರು, ವಾಹನ ಬಿಡಿಭಾಗಗಳ ತಯಾರಕರು ಹಾಗೂ ಡ್ರೋನ್ ತಯಾರಿಕರಿಗೆ ತಲುಪುವ ಯೋಜನೆ. ಅದಾಗಲೇ ಇರುವ ವಾಹನ ತಯಾರಿಕೆ ಕಂಪನಿಗಳು ಈ ಉತ್ತೇಜನದ ಲಾಭ ಪಡೆಯುವುದಕ್ಕೆ ಮುಂದಿನ ಐದು ವರ್ಷಗಳಲ್ಲಿ ರು 1,000 ಕೋಟಿಯನ್ನು ಹೊಸತಾಗಿ ಹೂಡಿಕೆ ಮಾಡಬೇಕು. ಹೊಸಬರಾದರೆ ರು 2,000 ಕೋಟಿ. ವಾಹನದ ಬಿಡಿಭಾಗಗಳ ವಿಭಾಗದಲ್ಲಿ ಈಗಲೇ ಇರುವ ಕಂಪನಿಗಳು ರು 250 ಕೋಟಿ, ಹೊಸಬರಾದರೆ ರು 500 ಕೋಟಿ ಹೂಡಿಕೆ ಮಾಡಿದರೆ ಉತ್ತೇಜನಕ್ಕೆ ಅರ್ಹರಾಗುತ್ತಾರೆ. 

ಮುಖ್ಯವಾಗಿ ಇದು 2.5 ಲಕ್ಷ ಕೋಟಿ ರುಪಾಯಿಗಳ ಮೌಲ್ಯದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ 7.5 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಹಾಗೂ ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ಇಂಧನ ಸೆಲ್ ವಾಹನಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲಿದೆ ಎಂಬ ನಿರೀಕ್ಷೆ ಇದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss