ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ಒದಗಿಸಲು ಹೈಕೋರ್ಟ್ ‘ಟೆಲಿಗ್ರಾಮ್ ಚಾನೆಲ್’ ಒಂದನ್ನು ಆರಂಭಿಸಿದೆ.
‘High court virtual case information service’ ಎಂಬ ಹೆಸರಿನಲ್ಲಿ’ HCKChatBot’ ಅಭಿವೃದ್ಧಿಪಡಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಚಾನೆಲ್ ಉದ್ಘಾಟಿಸಿದ್ದಾರೆ.
ಈಗಾಗಲೇ 6,500 ಸದಸ್ಯರು ಹೈಕೋರ್ಟ್ ಚಾನೆಲ್ನ ಸಬ್ಸ್ಕ್ರಿಪ್ಷನ್ ಪಡೆದುಕೊಂಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಸದಸ್ಯರು ಜಿಲ್ಲಾ ನ್ಯಾಯಾಲಯಗಳ ಚಾನೆಲ್ ಸಬ್ಸ್ಕ್ರಿಪ್ಷನ್ ಪಡೆದುಕೊಂಡಿದ್ದಾರೆ. ವಕೀಲರು, ಕಕ್ಷಿದಾರರು, ಸಾರ್ವಜನಿಕರಿಗೆ ಈ ಸೇವೆಯಿಂದ ಉಪಯೋಗವಾಗಲಿದೆ. ಡಿಜಿಟಲ್ ಯುಗದಲ್ಲಿ ಎಲ್ಲಾ ವಿಚಾರಣೆಗಳನ್ನು ಜನ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಇ-ನ್ಯಾಯಾಲಯದ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆ ಸ್ಥಿತಿ, ದೈನಂದಿನ ಆದೇಶಗಳನ್ನು ಈ ಚಾನೆಲ್ನಲ್ಲಿ ನೋಡಬಹುದಾಗಿದೆ.