ಕನ್ನಡತಿ ಅನುಷಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗಿನ ನಟ ನಾಗಶೌರ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗಿನ ಸ್ಟಾರ್ ಹೀರೋ ನಾಗಶೌರ್ಯ ಕನ್ನಡದ ಹುಡುಗಿ ಅನುಷಾ ಶೆಟ್ಟಿ ಜೊತೆ ಇಂದು ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಟಾಲಿವುಡ್‌ನ ಸಾಕಷ್ಟು ಸಿನಿಮಾ ಮಾಡಿರುವ ನಟ ನಾಗಶೌರ್ಯ ಇದೀಗ ಕರ್ನಾಟಕದ ಅಳಿಯ ಆಗಿದ್ದಾರೆ. ಕುಂದಾಪುರದ ಮೂಲದ ಹುಡುಗಿ ಅನುಷಾ, ಬೆಂಗಳೂರಿನಲ್ಲಿ ಮನೆಯ ಒಳಾಂಗಣ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಸಂಸ್ಥೆಯನ್ನ ಕೂಡ ತೆರೆದಿದ್ದಾರೆ. ಇನ್ನೂ ನಾಗಶೌರ್ಯ ಕನ್ನಡದ ಹುಡುಗಿಯನ್ನು ಪ್ರೀತಿಸಿ, ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.

ನಾಗ್ ಮತ್ತು ಅನುಷಾ ಶೆಟ್ಟಿ ಮದುವೆ ನವೆಂಬರ್ 20ರಂದು ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆದಿದೆ. ನಾಗ್, ಅನುಷಾ ಮದುವೆ ಇಂದು 11.25ರ ಶುಭ ಮುಹೂರ್ತದಲ್ಲಿ ನಡೆದಿದೆ. ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಕೆಲವೇ ಮಂದಿಗೆ ನಾಗಶೌರ್ಯ ಮದುವೆಗೆ ಸಾಕ್ಷಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!