ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿaತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ತೆಲುಗಿನ ಬಹುಬೇಡಿಕೆಯ ನಟ ಕಾರ್ತಿಕೇಯ ತಮ್ಮ ಬಹುಕಾಲದ ಗೆಳತಿ ಲೋಹಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿಶ್ಚಿತಾರ್ಥ ಸಮಾರಂಭ ಕುಟುಂಬಸ್ಥರ ಸಮ್ಮುಖದಲ್ಲಿ ಭರ್ಜರಿಯಾಗಿ ನೆರವೇರಿದೆ.
ಈ ಕುರಿತಂತೆ ಕಾರ್ತಿಕೇಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ನನ್ನ ಒಳ್ಳೆಯ ಸ್ನೇಹಿತೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಹೇಳಿಕೊಳ್ಳಲು ಖುಷಿಯಾಗುತ್ತಿದೆ. ನಾನು ಲೋಹಿತಾಳನ್ನು 2010ರಲ್ಲಿ ಎನ್ಐಟಿ ವಾರಂಗಲ್ನಲ್ಲಿ ಭೇಟಿಯಾಗಿದ್ದೆ” ಎಂದು 2010ರಲ್ಲಿ ಲೋಹಿತಾರನ್ನ ತಾವು ಭೇಟಿ ಮಾಡಿದಾಗ ಕ್ಲಿಕ್ಕಿಸಿಕೊಂಡ ಫೋಟೋ ಹಾಗೂ ಈಗಿನ ನಿಶ್ಚಿತಾರ್ಥದ ಫೋಟೋವನ್ನು ಕಾರ್ತಿಕೇಯ ಹಂಚಿಕೊಂಡಿದ್ದಾರೆ.
ಚಿತ್ರರಂಗದ ತಾರೆಯರು ಹಾಗೂ ಅಭಿಮಾನಿಗಳಿಂದ ಕಾರ್ತಿಕೇಯ ಮತ್ತು ಲೋಹಿತಾಗೆ ಶುಭಾಶಯಗಳ ಸಾಗರವೇ ಹರಿದು ಬರುತ್ತಿದೆ.
https://www.instagram.com/p/CS64VjtltZH/?utm_source=ig_web_copy_link