ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನಲ್ಲಿನ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಬಿಡುಗಡೆ ಪೂರ್ವ ಸಮಾರಂಭವು ರಾಜಕೀಯ ಮತ್ತು ಸಿನಿಮಾ ಲೋಕದಲ್ಲಿ ಹೊಸ ಚರ್ಚೆಗೆ ನಾಂದಿಯಾಗಿದೆ. ತೆಲುಗಿನ ‘ಪವರ್ ಸ್ಟಾರ್’ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು, ಬಾಲಿವುಡ್ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದ್ದಾರೆ.
ಹಿಂದಿ ಚಿತ್ರರಂಗವು ದಕ್ಷಿಣ ಭಾರತದ ಸಂಸ್ಕೃತಿಯನ್ನು ಅಗೌರವದಿಂದ ನಡೆಸಿಕೊಂಡಿದೆ ಎಂದು ಅವರು ದೂರಿದ್ದಾರೆ.
ಬಾಲಿವುಡ್ ನಮ್ಮ ಸಂಸ್ಕೃತಿಯನ್ನು, ಭಾಷೆಯನ್ನು ಮತ್ತು ಉಡುಗೆ-ತೊಡುಗೆಯನ್ನು ಹಾಸ್ಯಾಸ್ಪದವಾಗಿ ಅಥವಾ ವಿದೂಷಕರೆಂದು ತೋರಿಸಿದೆ. ಇದು ದಕ್ಷಿಣದ ಜನರ ಬಗ್ಗೆ ತಪ್ಪಾದ ಚಿತ್ರಣ ನೀಡುತ್ತಿದೆ. ಆದರೆ ನಾವು ನಮ್ಮ ಸಂಸ್ಕೃತಿಯನ್ನು ಗೌರವದಿಂದ ಜಗತ್ತಿಗೆ ಪರಿಚಯಿಸುತ್ತೇವೆ,” ಎಂದು ಹೇಳಿದ್ದಾರೆ.
ಈ ವೇಳೆ ಪವನ್ ಕಲ್ಯಾಣ್ ಅವರು ದಕ್ಷಿಣದ ಚಿತ್ರರಂಗಗಳಾದ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಇಂಡಸ್ಟ್ರಿಗಳನ್ನು ಶ್ಲಾಘಿಸಿದರು. ‘ಕಾಂತಾರ’, ‘ಪುಷ್ಪ’, ‘RRR’ ಮುಂತಾದ ಚಿತ್ರಗಳು ತಮ್ಮ ಸ್ಥಳೀಯ ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಚಿತ್ರಿಸಿ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ ಎಂದು ಉದಾಹರಣೆ ನೀಡಿದರು.
ಪವನ್ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಿವುಡ್‌ನಲ್ಲಿ ಪ್ರಾದೇಶಿಕ ಸಂಸ್ಕೃತಿಗಳ ಪ್ರದರ್ಶನದ ಕುರಿತಾಗಿ ಹೊಸ ಆತ್ಮಪರಿಶೀಲನೆಯ ಚರ್ಚೆಗೆ ಕಾರಣವಾಗುತ್ತಿದೆ.