ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪಾಕಿಸ್ತಾನದಲ್ಲಿ ಅಲ್ಲಿನ ಜನರ ದಾಳಿಯ ನಂತರ ಧ್ವಂಸವಾಗಿ ಮತ್ತೆ ಮರುನಿರ್ಮಾಣ ಮಾಡಲಾಗಿದ್ದ ಹಿಂದು ದೇವಾಲಯವೊಂದಕ್ಕೆ 200 ಮಂದಿ ಹಿಂದುಗಳ ನಿಯೋಗವೊಂದು ತೆರಳಿ ಪೂಜೆ ಸಲ್ಲಿಸಿ ಬಂದಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ಖೈಬರ್ ಫಕ್ತುಂಖ್ವಾ ಪ್ರಾಂತ್ಯದ ತೆಹ್ರಿ ಎಂಬ ಹಳ್ಳಿಯಲ್ಲಿರುವ ಮಹಾರಾಜ ಪರಮಹಂಸ ಜೀ ಅವರ ಮಂದಿರ ಮತ್ತು ಸಮಾಧಿ ನೂರು ವರ್ಷ ಹಳತಾದದ್ದು. ಪಾಕಿಸ್ತಾನದ ಕಟ್ಟರ್ವಾದಿ ಪಕ್ಷವೊಂದು ಇದರ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯಮಟ್ಟದಲ್ಲಿ ಗದ್ದಲವೆದ್ದಾಗ, ಪಾಕಿಸ್ತಾನದ ಆಡಳಿತ ಅದರ ಮರು ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿತ್ತು.
ಇದೀಗ ಭಾರತ, ಗಲ್ಫ್ ಹಾಗೂ ಅಮೆರಿಕದಲ್ಲಿ ವಾಸಿಸುವ ಹಿಂದುಗಳೆಲ್ಲ ಒಟ್ಟಾಗಿ 200 ಸಂಖ್ಯೆಯಲ್ಲಿ ಅಲ್ಲಿಗೆ ತೆರಳಿ ಪೂಜೆ ಮಾಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಭಾರೀ ಬಿಗಿ ಭದ್ರತೆ ವಹಿಸಲಾಗಿತ್ತು ಎಂದು ವರದಿಯಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ