ಯಲ್ಲಾಪುರದಲ್ಲಿ ಸಾರಿಗೆ ಬಸ್‌ಗೆ ಟೆಂಪೋ ಡಿಕ್ಕಿ: ವಾಹನದ ಮುಂಭಾಗ ನಜ್ಜುಗುಜ್ಜು, ಪ್ರಯಾಣಿಕರಿಗೆ ಗಾಯ

ಹೊಸದಿಗಂತ ವರದಿ ಯಲ್ಲಾಪುರ : ಸಾರಿಗೆ ಇಲಾಖೆ ಬಸ್ಸಿಗೆ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ 20 ಕ್ಕೂ ಅಧಿಕ ಜನರಿಗೆ ಚಿಕ್ಕಪುಟ್ಟ ಪೆಟ್ಟು ತಗುಲಿದ ಘಟನೆ ಅರಬೈಲ್ ಘಟ್ಟದಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಗೆ ನಡೆದಿದೆ.ಸಾರಿಗೆ ಇಲಾಖೆಯ ಚಾಲಕನ ಸಮಯಪ್ರಜ್ಞೆಯಿಂದಾಗಿ ಆಗಬಹುದಾದ ದೊಡ್ಡ ಅಪಘಾತ ತಪ್ಪಿದೆ. ಭಟ್ಕಳದಿಂದ ರಾಯಭಾಗಕ್ಕೆ ಹೋಗುತ್ತಿದ್ದ ಬಸ್ಸಿಗೆ ಪುಣೆಯಿಂದ ಬರುತ್ತಿದ್ದ ಪ್ರವಾಸಿಗರ ಟೆಂಪೋ ವೇಗದಿಂದ ಬಂದು ಗುದ್ದಿದೆ. ಅಪಘಾತದಲ್ಲಿ ಟೆಂಪೋದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಟೆಂಪೋಚಾಲಕನ ಕಾಲು ಸಿಕ್ಕಿಬಿದ್ದಿದ್ದು ಪ್ರಯಾಸದಿಂದ ಆತನನ್ನು ಹೊರ … Continue reading ಯಲ್ಲಾಪುರದಲ್ಲಿ ಸಾರಿಗೆ ಬಸ್‌ಗೆ ಟೆಂಪೋ ಡಿಕ್ಕಿ: ವಾಹನದ ಮುಂಭಾಗ ನಜ್ಜುಗುಜ್ಜು, ಪ್ರಯಾಣಿಕರಿಗೆ ಗಾಯ