ಹೊಸ ದಿಗಂತ ವರದಿ, ತುಮಕೂರು:
ಸೋಮವಾರ ಬೆಳಿಗ್ಗೆ ಶಿರಾ ತಾಲೂಕಿನ ಬರಗೂರು ಸಮೀಪದ ಬಂಡೇಗೇಟ್ ಬಳಿ ಹುಣಸೇಹಣ್ಣು ತುಂಬಿದ ಟೆಂಪೋಟ್ರಾವಲರ್ ಅಪಘಾತಕ್ಕೀಡಾಗಿ ಇಬ್ಬರು ಮೃತರಾಗಿದ್ದಾರೆ.
ಹುಣಸೇಹಣ್ಣಿನ ವ್ಯಾಪಾರಿಗಳು ಟಿಟಿಯಲ್ಲಿ ಶಿರಾ ತಾಲೂಕಿನ ಗ್ರಾಮಾಂತರ ಪ್ರದೇಶ ಗಳಿಂದ ಹುಣಸೇಹಣ್ಣು ತುಂಬಿಕೊಂಡು ಪಾವಗಡ ತಾಲೂಕಿನ ಕರೇಕ್ಯಾತನಹಳ್ಳಿಗೆ ಹೋಗುವಾಗ ಚಾಲಕನ್ನನ್ನು ಹಿಡಿತ ತಪ್ಪಿ ಈ ಅಪಘಾತ ಸಂಭವಿಸಿದ.ರಸ್ತೆಯಲ್ಲಿ ಹುಣಸೇಹಣ್ಣು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಉದ್ದಗಟ್ಟೆಯ ಉಗ್ರಪ್ಪ ಸ್ಥಳದಲ್ಲಿಯೇ ಮೃತರಾಗಿದ್ದು. ದೊಡ್ಡ ಕರೇಕ್ಯಾತನಹಳ್ಳಿಯ ರಮೇಶ್ ಆಸ್ಪತ್ರೆಗೆ ಸಾಗಿಸುವಾಗ ಮೃತನಾಗಿದ್ದಾನೆ. ಟಿಟಿಯಲ್ಲಿ ಹುಣಸೇಹಣ್ಣಿನ ಜೊತೆಗೆ ಹನ್ನೊಂದು ಜನರು ಸಂಚರಿಸುತ್ತಿದ್ದು ಉಳಿದ ಒಂಬತ್ತು ಮಂದಿಯನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ.