ಫುಟ್ಬಾಲ್‌ ಪಂದ್ಯಾವಳಿ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ; 200 ಕ್ಕೂ ಹೆಚ್ಚು ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕೇರಳದ ಮಲಪ್ಪುರಂ ಜಿಲ್ಲೆಯ ವಂದೂರು ಬಳಿ ಆಯೋಜಿಸಿದ್ದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕ್ರೀಡಾಂಗಣದ ಗ್ಯಾಲರಿ ಕುಸಿದು 200 ಮಂದಿ ಗಾಯಗೊಂಡಿದ್ದಾರೆ.
ಕಾಳಿಕಾವು-ವಂದೂರು ರಸ್ತೆಯ ಪೂಂಗೋಡು ಫುಟ್ಬಾಲ್ ಮೈದಾನದಲ್ಲಿ ಈ ಅವಘಡ ಸಂಭವಿಸಿದೆ. ಎರಡು ಸ್ಥಳೀಯ ತಂಡಗಳ ನಡುವೆ ನಡೆಯುತ್ತಿದ್ದ ಫೈನಲ್‌ ಪಂದ್ಯ ವೀಕ್ಷಿಸಲು 2 ಸಾವಿರಕ್ಕೂ ಹೆಚ್ಚು ಮಂದಿ ಗ್ಯಾಲರಿಯಲ್ಲಿ ಸೇರಿದ್ದರು. ‌
ತಾತ್ಕಾಲಿಕವಾಗಿ ನಿರ್ಮಿಸಿದ್ದ ಗ್ಯಾಲರಿ ಕುಸಿದು ಅನಾಹುತಕ್ಕೆ ಕಾರಣವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಬಿದಿರು ಮತ್ತು ಅಡಿಕೆ ಹಲಗೆಗಳಿಂದ ನಿರ್ಮಿಸಿದ್ದ ಗ್ಯಾಲರಿ ಅಕಾಲಿಕ ಮಳೆಗೆ ಕುಸಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಾಯಾಳುಗಳಲ್ಲಿ 100 ಕ್ಕೂ ಹೆಚ್ಚಿನ ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!