Friday, July 1, 2022

Latest Posts

ಹತ್ತು ಆಮ್ಲಜನಕ ಸಾಂದ್ರಕ ಹಸ್ತಾಂತರ ಮಾಡಿದ ಅಮೆರಿಕದ ಸೇವಾ ಇಂಟರ್ನ್ಯಾಷನಲ್ ಸಂಸ್ಥೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………….

ಹೊಸ ದಿಗಂತ ವರದಿ, ರಾಮನಗರ:

ಕೋವಿಡ್ 19 ರ ಸೇವಾಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜನಕಲ್ಯಾಣ ಟ್ರಸ್ಟ್ ರಾಮನಗರ ಶಾಖೆಗೆ ಅಮೆರಿಕದ ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯು ಕೋವಿಡ್ ರೋಗಿಗಳ ಉಪಯೋಗಕ್ಕಾಗಿ ಒಟ್ಟು 10 ಆಮ್ಲಜನಕ ಸಾಂದ್ರಕಗಳನ್ನು ನೀಡಿತು.
ರಾಮನಗರ ಟೌನ್ ನಲ್ಲಿ ರುವ ಸಂಘದ ಆಮ್ಲಜನಕ ಸಾಂದ್ರಕ ಹಸ್ತಾಂತರ ಮಾಡಿದ ನಂತರ ಮಾತನಾಡಿದ ಅಮೆರಿಕದ ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯ ಅ. ಸಂದೀಪ್ ರವರು ದೇಶದಲ್ಲಿ ಕೊರೋನಾ ಮಹಮಾರಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಸಾವಿರಾರು ಜನರು ಆಮ್ಲಜನಕದ ಕೊರತೆಯಿಂದಾಗಿ ಸಾವುಗಳ ಸಂಭವಿಸಿದೆ ಇದನ್ನು ಮನಗಂಡ ನಮ್ಮ ಸಂಸ್ಥೆಯು ಇಂದು ಜನಕಲ್ಯಾಣ ಟ್ರಸ್ಟ್ ನ ಕಚೇರಿ ಸಂಘಮಿತ್ರದಲ್ಲಿ ಹತ್ತು ಆಮ್ಲಜನಕ ಸಾಂದ್ರಕಗಳನ್ನು ಸಂಚಾಲಕರಾದ ಶ್ರೀ ಹೊನ್ನಪ್ಪ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು
ಸಂಚಾಲಕರಾದ ಹೊನ್ನಪ್ಪ ಮಾತನಾಡಿ ಕೊರೋನಾ ದಿಂದ ಹಲವಾರು ಮಂದಿ ಆಮ್ಲಜನಕದ ಕೊರತೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಇಂತಹ ಸಂದರ್ಭದಲ್ಲಿ ದೇಶದಲ್ಲಿರುವವರಲ್ಲಾದೇ ಹೊರ ದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದವರು ಕೂಡ ಸಹಾಯ ಮಾಡುತ್ತಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ ಅಮೆರಿಕದ ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯವರು ಹತ್ತು ಆಮ್ಲಜನಕ ಸಾಂದ್ರಕ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಮನಗರ ಜಿಲ್ಲಾ ವ್ಯವಸ್ಥಾ ಪ್ರಮುಖರಾದ ರಾಮಣ್ಣ ಉಪಸ್ಥಿತರಿದ್ದರು.
ರಾಮನಗರ ಜಿಲ್ಲೆಯ ಸಾರ್ವಜನಿಕರು ಅಗತ್ಯತೆಯ ಮೇರೆಗೆ ಸೌಲಭ್ಯಕ್ಕಾಗಿ ಈ ದೂರವಾಣಿಗೆ 9845384924 / 7760604060 ಸಂಪರ್ಕಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss