ಹೊಸದಿಗಂತ ವರದಿ, ಕಲಬುರಗಿ:
ಬೇರೆ ಜಿಲ್ಲೆಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಸಾಲ ಸಿಕ್ತಾ ಇದೆ. ಹೀಗಾಗಿ ಜಿಲ್ಲೆಯಲ್ಲೂ ಈಗ ನೀಡಲಾಗುತ್ತಿರುವ ಸಾಲದ ಪ್ರಮಾಣ ಹತ್ತು ಪಟ್ಟು ದೊರಕುವಂತಾಗಲು ತಾವೂ ಯತ್ನಿಸುವುದಾಗಿ ಕೆಕೆಆರ್ ಡಿಬಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ನಗರದ ಬೆಣ್ಣೂರು ಕಲ್ಯಾಣ ಮಂಟಪದಲ್ಲಿ ಸಿಂದಗಿ, ಪಟ್ಟಣ, ಭೀಮಳ್ಳಿ, ಸಾವಳಗಿ, ಕೋಟನೂರ ಡಿ, ಹುಣಸಿಹಡಗಿಲ್, ಶರಣಸಿರಸಗಿ, ಹೀರಾಪುರ, ಮಿಣಜಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ 2ಸಾವಿರ ರೈತರಿಗೆ 6 ಕೋ ರೂ ಬಡ್ಡಿ ರಹಿತ ಬೆಳೆಸಾಲ ವಿತರಣೆ ನೆರವೇರಿಸಿ ಮಾತನಾಡಿದರು.
ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ದೊರಬೇಕೆಂದರೆ ಬ್ಯಾಂಕ್ ಪುನಶ್ಚೇತನ ಗೊಳ್ಳಬೇಕು. ಹೀಗಾಗಿ ಪಡೆದ ಸಾಲ ಸಕಾಲಕ್ಕೆ ಮರುಪಾವತಿಸಬೇಕೆಂದರು.
ಈ ಹಿಂದೆ ರೈತರಿಗೆ ಸಾಲವನ್ನು ಅತ್ಯಂತ ಕನಿಷ್ಟ ( ಭೀಕ್ಷೆ ರೂಪದಲ್ಲಿ) ವಾಗಿ ನೀಡಲಾಗುತ್ತಿತ್ತು. ಈಗ ಹೆಚ್ಚಿಗೆ ನೀಡಲಾಗುತ್ತಿದೆ. ಇದು ಹೆಚ್ಚಿಸಲಾಗುತ್ಯಿದೆ. ಇದು ತಮ್ಮದು ರೈತಪರ ಎಂಬುದನ್ನು ನಿರೂಪಿಸುತ್ತದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರಣಬಸಪ್ಪ ಪಾಟೀಲ್ ಅಷ್ಠಗಾ ಮಾತನಾಡಿ, ರೈತರಿಗೆ ಸಾಲ ನೀಡದಿರುವ ಮಟ್ಟಿಗೆ ತಲುಪಿದ್ದ ಬ್ಯಾಂಕ್ ಪುನಶ್ಚೇತನ ಗೊಳ್ಳಲು ಹಿಂದಿನ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿ ಕಾರಣವಾಗಿದೆ. ಮಧ್ಯಾಮವಧಿ ಸಾಲ ಮನ್ನಾ ಮಾಡಿರುವುದು ಹಾಗೂ 10 ಕೋ. ರೂ ಷೇರು ನೀಡಿರುವುದು ಜತೆಗೆ ಪ್ರಮುಖ ವಾಗಿ 200 ಕೋ ರೂ ಅಪೆಕ್ಸ್ ದಿಂದ ಸಾಲ ದೊರಕಿಸುವಂತೆ ಮಾಡಿರುವುದೇ ಕಾರಣಗಳಾಗಿವೆ ಎಂದು ವಿವರಿಸಿದರು. ಮತ್ತೋರ್ವ ನಿರ್ದೇಶಕ ಅಶೋಕ ಸಾವಳೇಶ್ವರ ಸಹ ಮಾತನಾಡಿದರು.
ಡಿಸಿಸಿ ಬ್ಯಾಂಕ್ ಎಂಡಿ ಚಿದಾನಂದ ನಿಂಬಾಳ, ಜನರಲ್ ಮ್ಯಾನೇಜರ ಮುತ್ತುರಾಜ, ತಹಶಿಲ್ದಾರ ಪ್ರಕಾಶ ಕುದುರೆ, ಸಹಾಯಕ ಕೃಷಿ ನಿರ್ದೇಶಕ ಚಂದರಕಾಂತ ಜೀವಣಗಿ, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರುಗಳಾದ ಲಿಂಗರಾಜ ಧುಳಗೊಂಡ, ಸಂಗಮೇಶ್ವರ ಚೋರಗಸ್ತಿ, ಶಿವರಾಯ ಶಿವಮೂರ್ತಿ, ಶಿವರಾಜ ಎಸ್ ಸಿರಸಗಿ ಕೋಟನೂರ, ಪ್ರಭುಲಿಂಗ ಮೂಲಗೆ, ಗಂಗಾಧರ ಪೊಲೀಸ್ ಪಾಟೀಲ್, ಲಿಂಗಣಗೌಡ ಪಾಟೀಲ್, ಬ್ಯಾಂಕ್ ನ ಅಧಿಕಾರಿ ಗಳಾದ ಬಸವರಾಜ ಕಲ್ಲೂರ, ರುದ್ರಗೌಡ, ಸದಲಾಪುರ, ಪ್ರವೀಣ್, ಮಲ್ಲಿಕಾರ್ಜುನ, ಗಣಪುರ ಸೇರಿದಂತೆ ಮುಂತಾದವರಿದ್ದರು.