HEALTHY DRINK| ನಿಮ್ಮ ಆರೋಗ್ಯಕ್ಕಾಗಿ ದಿನಕ್ಕೊಂದು ಸೀಯಾಳ ಕುಡಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೀಯಾಳ, ಎಳೆನೀರು, ಬೊಂಡ ಹೀಗೆ ಹಲವು ನಾಮಧೇಯಗಳಿಂದ ಕರೆಯಲ್ಪಡುವ ನೈಸರ್ಗಿಕ ಶಕ್ತಿವರ್ಧಕ ಇಂದು ವಿಶ್ವದಾದ್ಯಂತ ಜನಪ್ರಿಯತೆ ಪಡೆಯುತ್ತಿದೆ.

ಎಳನೀರಿನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್, ವಿಟಮಿನ್ ಸಿ, ಅಮೈನೊ ಆಮ್ಲಗಳು ಮತ್ತು ಮೆಗ್ನೀಷಿಯಂ, ಪೊಟ್ಯಾಶಿಯಂ ತರಹದ ಖನಿಜಾಂಶಗಳು ನಮ್ಮ ಅಗತ್ಯತೆಯನ್ನು ಪೂರೈಸುತ್ತವೆ. ಇವುಗಳಲ್ಲಿ ನೈಸರ್ಗಿಕವಾದ ಎಲೆಕ್ಟ್ರೋಲೈಟ್ ಅಂಶಗಳು ಇರುವುದರಿಂದ ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತವೆ. ಹೀಗಾಗಿ ಎಳನೀರು ಕುಡಿದರೆ ನಿಶ್ಯಕ್ತಿ ಮತ್ತು ಬಳಲಿಕೆ ನಿವಾರಣೆ ಮಾಡಬಹುದು ಹಾಗೂ ದೇಹಕ್ಕೆ ಇದು ಶಕ್ತಿ ನೀಡುವುದು. ಎಳನೀರು ದೇಹವನ್ನು ಅದ್ಭುತವಾಗಿ ಹೈಡ್ರೇಟ್ ಮಾಡುವುದು ಮತ್ತು ಇದು ವ್ಯಾಯಾಮಕ್ಕೆ ಮೊದಲು ಹಾಗೂ ಬಳಿಕ ದೇಹಕ್ಕೆ ಶಕ್ತಿ ನೀಡುವುದು. ವ್ಯಾಯಾಮದ ಬಳಿಕ ಎಳನೀರು ಕುಡಿದರೆ ಅದರಿಂದ ದೇಹವು ಕಳೆದುಕೊಂಡಿರುವ ಎಲೆಕ್ಟ್ರೋಲೈಟ್ಸ್ ಮರಳಿ ಪಡೆಯಲು ಸಹಕಾರಿ.

ಅದ್ಭುತ ಗುಣಗಳನ್ನು ಹೊಂದಿರುವ ಎಳನೀರು ನಮ್ಮ ತ್ವಚೆ, ತಲೆ ಕೂದಲು ಮತ್ತು ದೇಹದ ಚರ್ಮಕ್ಕೆ ಇದು ಪ್ರಯೋಜನಕಾರಿಯಾಗಿದೆ. ಎಳನೀರಿನಲ್ಲಿ ಅಪಾರ ಪ್ರಮಾಣದ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ಎಳನೀರನ್ನು ನಮ್ಮ ಒಣ ತ್ವಚೆ, ಚರ್ಮದ ಕೆರೆತ ಮತ್ತು ಚರ್ಮದ ಸಿಪ್ಪೆ ಸುಲಿದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಬಳಕೆ ಮಾಡಬಹುದಾಗಿದೆ. ಇದು ನಮ್ಮ ನೆತ್ತಿಯ ಭಾಗಕ್ಕೂ ಕೂಡ ತುಂಬಾ ಒಳ್ಳೆಯದು. ತಲೆಕೂದಲಿನ ಹಲವಾರು ಸಮಸ್ಯೆಗಳಿಗೆ ಮತ್ತು ತಲೆ ಹೊಟ್ಟು ತೊಂದರೆಗೂ ಇದು ರಾಮಬಾಣವಾಗಿದೆ.

ನಿಮ್ಮ ಬಳಿ ಶುದ್ಧವಾದ ಅಪ್ಪಟ ಎಳನೀರು ಇದ್ದರೆ ಅದನ್ನು ನೆತ್ತಿಯ ಭಾಗಕ್ಕೆ ಹಾಗೂ ತಲೆಕೂದಲಿಗೆ ಅನ್ವಯಿಸಬಹುದು. ಕೆಲವರು ಜೋಜೋಬಾ ಅಥವಾ ಅವಕ್ಯಾಡೋ ಆಯಿಲ್ ಜೊತೆಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ ಆನಂತರ ಸ್ನಾನ ಮಾಡಲು ಮುಂದಾಗುತ್ತಾರೆ. ಕೆಲವರು ಸ್ನಾನ ಮಾಡಿದ ನಂತರ ಕೂಡ ಹಚ್ಚಿಕೊಳ್ಳುತ್ತಾರೆ. ಇದು ಎರಡು ರೀತಿಯಲ್ಲಿ ಪ್ರಯೋಜನಗಳನ್ನು ಕೊಡುತ್ತದೆ.

ಎಳನೀರನ್ನು ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಬಳಸಬಹುದಾಗಿದೆ. ನಿಮ್ಮ ತ್ವಚೆಯ ಹೊಳಪನ್ನು ಕಾಯ್ದಿರಿಸುವಲ್ಲಿ ಇದರ ಪಾತ್ರ ದೊಡ್ಡದಾಗಿದೆ. ಅರಿಶಿನದ ಜೊತೆ ಎಳನೀರನ್ನು ಮಿಶ್ರಣ ಮಾಡಿ ಮುಖದ ಭಾಗಕ್ಕೆ ಹಚ್ಚುತ್ತಾ ಬಂದರೆ ಕ್ರಮೇಣವಾಗಿ ಒಳ್ಳೆಯ ಫಲಿತಾಂಶಗಳನ್ನು ನೀವು ಕಾಣುವಿರಿ.

ಎಳನೀರಿನಲ್ಲಿ ಕಂಡುಬರುವ ಆಂಟಿ ಆಕ್ಸಿಡೆಂಟ್, ಖನಿಜಾಂಶಗಳು ಮತ್ತು ಫ್ಯಾಟಿ ಆಸಿಡ್ ನಿಮ್ಮ ಮುಖದ ಭಾಗದ ಚರ್ಮವನ್ನು ಸ್ಮೂತ್ ಮಾಡುತ್ತದೆ. ಇದನ್ನು ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ನಂತರ ಮುಖ ತೊಳೆದುಕೊಳ್ಳಬಹುದು.

ಎಳನೀರು ನಿಜಕ್ಕೂ ನಿಮ್ಮ ಸೌಂದರ್ಯಕ್ಕೆ ಒಂದು ರೀತಿಯ ಮ್ಯಾಜಿಕ್ ಮಾಡುತ್ತದೆ ಎಂದು ಹೇಳಬಹುದು. ಇದು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವ ಜೊತೆಗೆ ನಿಮ್ಮ ತ್ವಚೆಗೆ ನೀರಿನ ಅಂಶವನ್ನು ಒದಗಿಸಿ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ.

ಇದಕ್ಕಾಗಿ ನೀವು ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದರಲ್ಲಿ ಎಳನೀರನ್ನು ಅದ್ದಿ ನಿಮ್ಮ ತ್ವಚೆಗೆ ಅನ್ವಯಿಸಿಕೊಳ್ಳಬೇಕು. ಇದರಿಂದ ನಿಮ್ಮ ತ್ವಚೆಗೆ ಸಾಕಷ್ಟು ಅನುಕೂಲ ಇರುತ್ತದೆ.

ಇನ್ನಿತರ ಪ್ರಯೋಗಜನಗಳು:

ನಿರ್ಜಲೀಕರಣ ಸಮಸ್ಯೆ ದೂರವಿಡುತ್ತದೆ.

ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ.

ರಕ್ತದೊತ್ತಡ ಸಮಸ್ಯೆಗೆ ಪರಹಾರವಾಗಿದೆ

ಚಯಾಪಚಯ ಕ್ರಿಯೆಗೆ ಸಹಕಾರಿ ಹಾಗೂ ಕಿಡ್ನಿಕಲ್ಲುಗಳ ಸಮಸ್ಯೆಯನ್ನುನಿವಾರಿಸುತ್ತದೆ.

ಡೆಂಗ್ಯೂ, ಜ್ವರ, ಹೃದಯ ಉರಿ ಮೊದಲಾದ ವಿಷಯುಕ್ತ ರೋಗಗಳಿಗೆ ಎಳನೀರು ರಾಮಬಾಣವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!