ಹೊಸದಿಗಂತ ಡಿಜಿಟಲ್ ಡೆಸ್ಕ್:
ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಇಂದು ಕೂಡ ನಿಷೇಧಾಜ್ಞೆ ಜಾರಿಯಲ್ಲಿದೆ.
ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರಾಗಿಗುಡ್ಡ ಹೊರತುಪಡಿಸಿ ಶಿವಮೊಗ್ಗ ಸಹಕ ಸ್ಥಿತಿಗೆ ಬಂದಿದೆ. ಈಗಲೂ ಸೆಕ್ಷನ್ 144 ಜಾರಿಯಲ್ಲಿದ್ದು, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ.
ಕೆಲ ದಿನಗಳಿಂದ ಅಂಗಡಿಗಳನ್ನು ಬಂದ್ ಮಾಡಿದ್ದ ಮಾಲೀಕರು ಇಂದು ಅಂಗಡಿಗಳನ್ನು ತೆರೆದಿದ್ದಾರೆ, ಸಹಜ ಸ್ಥಿತಿಯತ್ತನಗರ ಬಂದಿದ್ದರೂ, ರಾಗಿಗುಡ್ಡ ಪ್ರದೇಶದ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ.