ಘೋರ ದುರಂತ: ನದಿಗೆ ಉರುಳಿದ ಸರ್ಕಾರಿ ಬಸ್, 20ಕ್ಕೂ ಹೆಚ್ಚು ಪ್ರಯಾಣಿಕರು ನೀರೊಳಗೆ ಸಿಲುಕಿರುವ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡಿನ ತೆನ್ಕಾಸಿ ಜಿಲ್ಲೆಯಲ್ಲಿ ಇಂದು (ಭಾನುವಾರ) ಭೀಕರ ಅಪಘಾತವೊಂದು ಸಂಭವಿಸಿದೆ. ಪ್ರಯಾಣಿಕರಿಂದ ತುಂಬಿದ್ದ ತಮಿಳುನಾಡು ಸರ್ಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಸುಮಾರು 30 ಅಡಿ ಆಳದ ‘ಅಳುತಾ ಕನ್ನಿ’ ನದಿಗೆ ಉರುಳಿ ಬಿದ್ದಿದೆ. ಈ ಘಟನೆಯಿಂದಾಗಿ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ನೀರೊಳಗೆ ಸಿಲುಕಿಕೊಂಡಿರುವ ಭೀತಿ ಎದುರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆನ್ಕಾಸಿ-ತಿರುನೆಲ್ವೇಲಿ ಮಾರ್ಗದಲ್ಲಿ ಚಲಿಸುತ್ತಿದ್ದ ಈ ಬಸ್ಸಿನಲ್ಲಿ ಒಟ್ಟು 32 ಪ್ರಯಾಣಿಕರಿದ್ದರು ಎನ್ನಲಾಗಿದೆ. ವೆಟ್ಟೈಕಾರನಕುಲಂ ಬಳಿ ತಲುಪುತ್ತಿದ್ದಂತೆ ಬಸ್ … Continue reading ಘೋರ ದುರಂತ: ನದಿಗೆ ಉರುಳಿದ ಸರ್ಕಾರಿ ಬಸ್, 20ಕ್ಕೂ ಹೆಚ್ಚು ಪ್ರಯಾಣಿಕರು ನೀರೊಳಗೆ ಸಿಲುಕಿರುವ ಭೀತಿ