ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿ ಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ಸೇರಿದ್ದು ಮಸಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ಸಮೀಪದ ದೇವನಹಳ್ಳಿ ಹೊರವಲಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಣಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ಕಾಶಿ ಯಾತ್ರೆಗೆ ತೆರಳುತ್ತಿದ್ದವರ ಪ್ರಯಾಣವೇ ದುರಂತವಾಗಿ ಅಂತ್ಯಗೊಂಡಿದೆ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಮಹಿಳೆಯರ ಗುಂಪೊಂದು ಕಾಶಿ ಪ್ರವಾಸಕ್ಕಾಗಿ ಟಿಟಿ ವಾಹನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿತ್ತು. ಬೆಳಗ್ಗೆ ವಿಮಾನ ಹತ್ತುವ ಯೋಜನೆ ಇದ್ದ ಕಾರಣ ಮಧ್ಯರಾತ್ರಿ ಪ್ರಯಾಣ … Continue reading ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿ ಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ಸೇರಿದ್ದು ಮಸಣ