ಪುಣೆ-ಬೆಂಗಳೂರು ಹೈವೇಯಲ್ಲಿ ಭೀಕರ ಅಪಘಾತ: 48 ವಾಹನಗಳು ಜಖಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಪುಣೆ ಸಮೀಪ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನವಲೆ ಬ್ರಿಡ್ಜ್ ಬಳಿ ಸರಣಿ ಅಪಘಾತ ಸಂಭವಿಸಿದ್ದು, 48 ವಾಹನಗಳು ನಜ್ಜುಗುಜ್ಜಾಗಿವೆ.

ಹಲವರಿಗೆ ಗಂಭೀರ ಗಾಯಗಳಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ. ಟ್ಯಾಂಕರ್‌ನಲ್ಲಿ ಚಲಿಸುತ್ತಿದ್ದ ಚಾಲಕ, ತನ್ನ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿದ್ದಾನೆ. ಟ್ಯಾಂಕರ್ ಒಂದು ವಾಹನಕ್ಕೆ ಗುದ್ದಿದ್ದು, ಇದರಿಂದ ಸರಣಿ ಅಪಘಾತ ಸಂಭವಿಸಿದೆ. ಒಟ್ಟಾರೆ 48 ವಾಹನಗಳು ಜಖಂಗೊಂಡಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರು ವಾಹನಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

 

ಸ್ಥಳಕ್ಕೆ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದ್ದು, ಹಾನಿಗೊಳಗಾದ ವಾಹನಗಳ ಜಖಂಗೊಂಡ ಅವಶೇಷಗಳಿಂದ ಹೊರತೆಗೆದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪುಣೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೊಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಘಟನಾ ಸ್ಥಳಕ್ಕೆ ತೆರಳಿ ತ್ವರಿತ ಕಾರ್ಯಾಚರಣೆ ನಡೆಸಿದೆ.

ಟ್ಯಾಂಕರ್ ಬ್ರೇಕ್ ಫೇಲ್ ಆಗಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಟ್ಯಾಂಕರ್‌ನಿಂದ ತೈಲ ರಸ್ತೆಮೇಲೆ ಸುರಿದಿದ್ದು, ಇದರಿಂದ ಇನ್ನರ್ಧ ಅಪಘಾತಗಳು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!