ಬಸ್​ ಮೇಲೆ ಉಗ್ರರ ಅಟ್ಟಹಾಸ: 11 ಯೋಧರು ಸೇರಿ 13 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಸಿರಿಯಾದಲ್ಲಿ ಬಸ್​ ಮೇಲೆ ​ ಉಗ್ರರು ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ಅಟ್ಟಹಾಸಕ್ಕೆ 11 ಸೈನಿಕರು ಸೇರಿದಂತೆ 13 ಜನರು ಸಾವನ್ನಪ್ಪಿದ್ದು, , ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಬಸ್ ಕೇಂದ್ರ ಪ್ರಾಂತ್ಯದ ಹೋಮ್ಸ್‌ಗೆ ತೆರಳುತ್ತಿತ್ತು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರಗಾಮಿ ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ನಿಯಂತ್ರಿಸಲ್ಪಟ್ಟ ರಕ್ಕಾ ಪ್ರಾಂತ್ಯದಲ್ಲಿ ಈ ದಾಳಿ ಸಂಭವಿಸಿದೆ. ಯೋಧರು ಬಸ್​ನಲ್ಲಿ ಸಂಚರಿಸುತ್ತಿದ್ದ ವೇಳೆ ಬಸ್​ ಗುರಿಯಾಗಿಸಿ ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ದಾಳಿಯ ಹಿಂದೆ ಐಸಿಸ್ ಉಗ್ರರ ಕೈವಾಡವಿದೆ ಎಂದು ಹೇಳಲಾಗ್ತಿದೆ. ಕಳೆದ ತಿಂಗಳು ಸಹ ಇದೇ ರೀತಿಯ ದಾಳಿ ನಡೆಸಿ ಜನರ ಪ್ರಾಣ ಹರಣ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!