ಟೆಸ್ಲಾದ ‌ʼಮೆಗಾಪ್ಯಾಕ್‌ʼ ಬ್ಯಾಟರಿ- ವಿದ್ಯುತ್‌ ವಲಯದ ಹೊಸ ಟ್ರೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಲ್ಲಿದ್ದಲಿನ ಕೊರತೆಯಿಂದಾಗಿ ವಿಶ್ವದ ಹಲವು ರಾಷ್ಟ್ರಗಳು ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿವೆ. ಭಾರತದಂತಹ ಸಂಪನ್ಮೂಲ ಸಮೃದ್ಧ ರಾಷ್ಟ್ರದಲ್ಲಿಯೂ  ಕಳೆದ ಕೆಲ ತಿಂಗಳಿಂದ ಕಲ್ಲಿದ್ದಲು ಬಿಕ್ಕಟ್ಟು ನಿಂದ ಸಮಸ್ಯೆಗಳು ಸೃಷ್ಟಿಯಾಗಿದ್ದನ್ನು ಗಮನಿಸಬಹುದು. ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನಾ ಕ್ಷೇತ್ರದ ದೈತ್ಯ ಸಂಸ್ಥೆ ಟೆಸ್ಲಾ ಜಾಗತಿಕವಾಗಿ ಕಾಡುತ್ತಿರುವ ಕಲ್ಲಿದ್ದಲು ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನಿಟ್ಟಿದೆ.
ಟೆಸ್ಲಾ ಸಂಸ್ಥೆಯು ಕಲ್ಲಿದ್ದಲು ಹಾಗೂ ಅನಿಲ ಸಂಸ್ಥೆಗಳು ಉತ್ಪಾದಿಸುವ ವಿದ್ಯುತ್‌ ಗೆ ಪರ್ಯಾಯವಾಗಿ ಕಂಟೇನರ್‌ ಮಾದರಿಯ ʼಮೆಗಾಪ್ಯಾಕ್ ಬ್ಯಾಟರಿʼಗಳನ್ನು ನಿರ್ಮಿಸುತ್ತಿದೆ. ಟೆಸ್ಲಾ ತನ್ನ ಅತಿದೊಡ್ಡ ಬ್ಯಾಟರಿ ಉತ್ಪಾದನಾ ಸಂಸ್ಥೆಯನ್ನು ಕಳೆದ ಏಪ್ರಿಲ್‌ನಲ್ಲಿ  ಕ್ಯಾಲಿಫೋರ್ನಿಯಾದಲ್ಲಿ ನಿರ್ಮಿಸಿದೆ. ಇದೀಗ ಅಮೆರಿಕಾದಲ್ಲಿ ಟೆಸ್ಲಾ ಮೆಗಾಪ್ಯಾಕ್‌ ಬ್ಯಾಟರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವರ್ಷಗಳಲ್ಲಿ ಕಲ್ಲಿದ್ದಲು ಹಾಗೂ ಅನಿಲ ಸ್ಥಾವರಗಳ ಮೇಲಿನ ಅವಲಂಬನೆಯನ್ನು ತೊಡೆದುಹಾಕಲಿದೆ ಎನ್ನಲಾಗುತ್ತಿದೆ.
ಈ ನಿಟ್ಟಿನಲ್ಲಿ ಸಂಸ್ಥೆಯು 2021ರಲ್ಲಿ ಯುಟಿಲಿಟಿ-ಸ್ಕೇಲ್ ಬ್ಯಾಟರಿ ಉತ್ಪಾದನೆಯ ವೇಗವನ್ನು ಸುಮಾರು ಹತ್ತು ಪಟ್ಟು ಹೆಚ್ಚಿಸಿದೆ. ಈ ದೊಡ್ಡ ಬ್ಯಾಟರಿಗಳ ಅತ್ಯುನ್ನತ ಅನುಕೂಲವೆಂದರೆ ʼಬೇಡಿಕೆ ಕಡಿಮೆಯಾದಾಗ ಈ ಬ್ಯಾಟರಿಗಳಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಸಂಗ್ರಹಿಸಿಡಬಹುದಾಗಿದೆ ಮತ್ತು ಬೇಡಿಕೆ ಹೆಚ್ಚಾದಾಗ ಅದನ್ನು ಮತ್ತೆ ಗ್ರಿಡ್‌ಗೆ ಪಂಪ್ ಮಾಡಬಹುದಾಗಿದೆ. 2023ರಲ್ಲಿ ಟೆಸ್ಲಾ ತನ್ನ ಎರಡನೇ ಮತ್ತು ಮೂರನೇ ಅತಿದೊಡ್ಡ ಬ್ಯಾಟರಿ ಯೋಜನೆಗಳನ್ನು ನಿರ್ಮಿಸಲಿದೆ.
ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಟೆಸ್ಲಾಗೆ ಪ್ರಭಲ ಪೈಪೋಟಿ ಎದುರಾಗಿದೆ. ಭವಿಷ್ಯದ ಮಾರುಕಟ್ಟೆ ಮೇಲೆ ಕಣ್ಣಿಟ್ಟಿರುವ ಜಾಗತಿಕ ದೈತ್ಯ ಸಂಸ್ಥೆಗಳಾದ ಎಲ್‌ಜಿ ಮತ್ತು ಸ್ಯಾಮ್‌ ಸಂಗ್‌ ವಿದ್ಯುತ್‌ ಬ್ಯಾಟರಿಗಳ ನಿರ್ಮಾಣದತ್ತ ಹೆಚ್ಚಿನ ಗಮನ ಹರಿಸಿವೆ. ಈ ಸಂಸ್ಥೆಗಳ ಪೈಪೋಟಿ ಏನೇ ಇರಲಿ, ಪಳೆಯುಳಿಕೆ ಇಂಧನಗಳಿಂದ ಜಗತ್ತನ್ನು ದೂರವಿಡುವಲ್ಲಿ ಈ ವಿದ್ಯತ್‌ ಉತ್ಪಾದಕ ಬ್ಯಾಟರಿಗಳು ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಜೊತೆಗೆ ಕಲ್ಲಿದ್ದಲು ಸ್ಥಾವರಗಳಿಂದ ಉಂಟಾಗುತ್ತಿರುವ ಅಪಾರ ಇಂಗಾಲ ಮಾಲಿನ್ಯ, ಪಳೆಯುಳಿಕೆ ಇಂಧನಕ್ಕಾಗಿ ಭೂಮಿಯಾಳದಲ್ಲಿ ನಡೆಯುತ್ತಿರುವ ಅವ್ಯಾಹತ ಗಣಿಗಾರಿಕೆಯನ್ನು ತಡೆಗಟ್ಟಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!