ಟೆಸ್ಲಾ ಮಾಲೀಕ ಮಸ್ಕ್ ವಿಶ್ವದಲ್ಲೇ ಕುಬೇರ: ಹಾಗಾದರೆ ಎಷ್ಟನೇ ಸ್ಥಾನದಲ್ಲಿದ್ದಾರೆ​ ಅಂಬಾನಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿ ಹೊರಬಿದಿದ್ದು, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಈ ವರ್ಷದ ಜಗತ್ತಿನ ಸಿರಿವಂತರಾಗಿದ್ದು, 274.3 ಬಿಲಿಯನ್​ ಡಾಲರ್​ ಸಂಪತ್ತ ಇವರ ಬಳಿಯಿದೆ.
2022ರ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, . ಅಮೆಜಾನ್​ ಸಂಸ್ಥಾಪಕ ಜೆಫ್​ ಬೆಜೋಸ್​ ಅವರಿಗಿಂತ 100 ಕೋಟಿಗೂ ಅಧಿಕ ಸಂಪತ್ತನ್ನು ಹೊಂದಿರುವ ಮಸ್ಕ್‌ ಅವರ ನಿವ್ವಳ ಮೌಲ್ಯವು 270 ಬಿಲಿಯನ್​ ಡಾಲರ್​ಗೆ ಏರಿದೆ.
ಕೋವಿಡ್ ಸಾಂಕ್ರಾಮಿಕದ ಹೊಡೆತದ ಬಳಿಕ ಅತಿ ಹೆಚ್ಚು ನಷ್ಟ ಹೊಂದಿದವರಲ್ಲಿ ಎಲಾನ್​ ಮಸ್ಕ್​ ಕೂಡ ಒಬ್ಬರು. ಇದರಿಂದ 2020 ರ ಆರಂಭದಲ್ಲಿ ಮಸ್ಕ್​ ಕೇವಲ 26.6 ಬಿಲಿಯನ್​ ಡಾಲರ್​ ಮೌಲ್ಯ ಸಂಪತ್ತನ್ನು ಹೊಂದಿದ್ದರು. ಆದರೆ ಈ ವರ್ಷ ಅವರ ಸಂಪತ್ತು ಏಕಾಏಕಿ 110 ಬಿಲಿಯನ್​ ಡಾಲರ್​ಗಳಷ್ಟು ವೃದ್ಧಿಸಿದೆ.
ಅವರ ಬಳಿಕ ಅಮೆಜಾನ್​ ಸಂಸ್ಥಾಪಕ ಜೆಫ್​ ಬೆಜೋಸ್ ಸ್ಥಾನದಲ್ಲಿದ್ದು, ೧೮೦. ೨ ಬಿಲಿಯನ್​ ಡಾಲರ್​ನಷ್ಟು ಹೊಂದಿದ್ದಾರೆ. ನಂತರ ಎಲ್​ವಿಎಂಎಚ್​ ಸಿಇಒ ಬರ್ನಾರ್ಡ್ ​ 165.5 ಬಿಲಿಯನ್​ ಡಾಲರ್​ ಸಂಪತ್ತನ್ನು ಹೊಂದಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು ಮೈಕ್ರೋಸಾಫ್ಟ್ ಸಂಸ್ಥಾಪಕರಾದ ಬಿಲ್ ಗೇಟ್ಸ್ (134.2 ಬಿಲಿಯನ್​ ಡಾಲರ್​) ಮತ್ತು ಸ್ಟೀವ್ ಬಾಲ್ಮರ್ (97 ಬಿಲಿಯನ್​ ಡಾಲರ್​) ಅವರು ನಂತರದ ಸ್ಥಾನದಲ್ಲಿದ್ದಾರೆ.
ಮುಖೇಶ್​ ಅಂಬಾನಿ ಭಾರತದ ಶ್ರೀಮಂತ:
ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ರಿಲಯನ್ಸ್​ ಕಂಪನಿ ಮುಖ್ಯಸ್ಥ ಮುಖೇಶ್​ ಅಂಬಾನಿ ಅಗ್ರ 10 ಶ್ರೀಮಂತರಲ್ಲಿ ಕಾಣಿಸಿಕೊಂಡಿದ್ದಾರೆ. 10 ನೇ ಸ್ಥಾನದಲ್ಲಿರುವ ಮುಖೇಶ್​ ಅಂಬಾನಿ ಅವರು ಭಾರತದ ಶ್ರೀಮಂತರಲ್ಲಿ ಪ್ರಥಮರಾಗಿದ್ದಾರೆ. ಗೌತಮ್​ ಅದಾನಿ 11 ಸ್ಥಾನದಲ್ಲಿದ್ದು, ದೇಶದ 2ನೇ ಶ್ರೀಮಂತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!