ಬಂಡಾಯ ನಾಯಕರ ವಿರುದ್ಧ ಠಾಕ್ರೆ ವಾರ್: ಸಚಿವರ ಖಾತೆ ಕಿತ್ತುಕೊಂಡ ಮಹಾರಾಷ್ಟ್ರ ಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ಸರಕಾರವನ್ನು ಪತನದ ಹಂಚಿಗೆ ತಂದಿಟ್ಟಿರುವ ಬಂಡಾಯ ನಾಯಕರ ವಿರುದ್ಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಖಾತೆಯ ಪ್ರಯೋಗ ಅಸ್ತ್ರ ಬಳಸಿದ್ದು, ಭಿನ್ನಮತೀಯ ಸಚಿವರಿಗೆ ನೀಡಿದ್ದ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಬಂಡಾಯ ಎದ್ದಿರುವ ಸಂಪುಟ ಸಚಿವರು ಹಾಗೂ ರಾಜ್ಯ ಸಚಿವರ ಖಾತೆಗಳನ್ನು ಹೊಸಬರಿಗೆ ವಹಿಸಿದ್ದಾರೆ.
ಬಂಡಾಯ ಎದ್ದಿರುವ ಶಿವಸೇನೆ ಶಾಸಕರು ಹಾಗೂ ಸಚಿವರ ನಾಯಕ ಏಕನಾಥ್ ಶಿಂಧೆ ಬಳಿ ನಗರಾಭಿವೃದ್ದಿ ಖಾತೆ ಯನ್ನು ಸುಭಾಷ್ ದೇಸಾಯಿಗೆ ವಹಿಸಲಾಗಿದೆ.
ಗುಲಾಬ್ ರಾವ್ ಪಾಟೀಲ್ ಅವರ ಬಳಿ ಇದ್ದ ನೀರು ಸರಬರಾಜು ಹಾಗೂ ಒಳಚರಂಡಿ ಖಾತೆಯನ್ನು ಅನಿಲ್ ಪರಬ್ ಅವರಿಗೆ ವಹಿಸಲಾಗಿದೆ.
ದಾದಾಜಿ ಭೂಸೆ ಬಳಿ ಇದ್ದ ಕೃಷಿ ಖಾತೆ, ಸಂದೀಪನ್ ಬುಮ್ರೆ ಬಳಿ ಇದ್ದ ಉದ್ಯೋಗ ಖಾತ್ರಿ ಹಾಗೂ ತೋಟಗಾರಿಕೆ ಖಾತೆಗಳನ್ನು ಶಂಕರ್ ಗಡಖ್ ಅವರಿಗೆ ವಹಿಸಲಾಗಿದೆ.
ಉದಯ್ ಸಾಮಂತ್ ಬಳಿ ಇದ್ದ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಖಾತೆಯನ್ನು ಆದಿತ್ಯ ಠಾಕ್ರೆಗೆ ನೀಡಲಾಗಿದೆ.
ಗುವಾಹಟಿ ರೆಸಾರ್ಟ್‌ ಸೇರಿರುವ ರಾಜ್ಯ ಮಂತ್ರಿಗಳಾದ ಶಂಭುರಾಜೆ ದೇಸಾಯಿ, ರಾಜೇಂದ್ರ ಯಡ್ರಾವ್ಕರ್, ಅಬ್ದುಲ್ ಸತ್ತಾರ್, ಬಚ್ಚು ಕಾಡು ಅವರ ಖಾತೆಗಳನ್ನು ಕ್ರಮವಾಗಿ ವಿಶ್ವಜೀತ್ ಕದಮ್, ಸತೇಜ್ ಪಟೇಲ್, ಅದಿತಿ ತತ್ಕರೆ ಹಾಗೂ ಪ್ರಸಾದ್ ತಾನ್ಪುರೆ ಅವರಿಗೆ ವಹಿಸಲಾಗಿದೆ.
ಈ ನಡುವೆ ಇತ್ತ ಭಿನ್ನಮತೀಯರಾದ ಏಕನಾಥ ಶಿಂಧೆ ಸೇರಿ 16 ಶಾಸಕರನ್ನು ಅನರ್ಹ ಮಾಡಲು ಉಪ ಸ್ಪೀಕರ್‌ ನರಹರಿ ಅವರು ನೀಡಿರುವ ನೋಟಿಸ್‌ ಅನ್ನು ರದ್ದು ಮಾಡಬೇಕು ಎಂದು ಕೋರಿ ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜುಲೈ 11ಕ್ಕೆ ಮುಂದೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!