ಗಾಂಜಾ ಮಾರಾಟಕ್ಕೆ ಕಾನೂನುಬದ್ಧ ಅನುಮತಿ, ಎಲ್ಲಿ ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಾಂಜಾ ಒಂದು ಅಮಲು, ಮಾದಕ ವ್ಯಸನವಾಗಿ ಅನೇಕ ಜೀವಗಳನ್ನು ತೆಗೆಯುವ ಮಾರಣಾಂತಿಕ ವಸ್ತು. ಅಂತಹ ಗಾಂಜಾವನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಭಾರತದಲ್ಲಿ ಕಾನೂನು ಅಪರಾಧವಾಗಿದೆ. ಆದರೆ, ಏಷ್ಯನ್ ದೇಶಗಳಲ್ಲಿ ಒಂದಾದ ಥಾಯ್ಲೆಂಡ್ ಗಾಂಜಾ ಮಾರಾಟವನ್ನು ಕಾನೂನುಬದ್ಧಗೊಳಿಸಿದೆ. ಗಾಂಜಾ ಕೃಷಿಗೆ ಥಾಯ್ಲೆಂಡ್‌ ಸರ್ಕಾರ ಅನುಮತಿ ನೀಡಿದ್ದು, ವೈದ್ಯಕೀಯ ಬಳಕೆಗಾಗಿ ಸುಮಾರು 10ಲಕ್ಷ ಗಾಂಜಾ ಸಸ್ಯಗಳನ್ನು ವಿತರಿಸಲು ಆರೋಗ್ಯ ಸಚಿವ ಚಾರ್ನ್ ವಿರಾಕುಲ್ ನಿರ್ಧರಿಸಿದ್ದಾರೆ.

ಸರ್ಕಾರದ ನಿರ್ಧಾರದಿಂದ ನಿನ್ನೆಯಿಂದಲೇ ಥಾಯ್ಲೆಂಡ್‌ನಲ್ಲಿನ ಅಂಗಡಿಗಳು ಮತ್ತು ಕೆಫೆಗಳಲ್ಲಿ ಗಾಂಜಾ ಮಾರಾಟ ಶುರುವಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆಯನ್ನು ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಮೂರು ತಿಂಗಳ ಜೈಲು ಶಿಕ್ಷೆ, 60 ಸಾವಿರ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಗಾಂಜಾ ಮಾರಾಟ ಕಾನೂನುಬದ್ಧವಾದದ್ದರಿಂದ ಈ ಪ್ರಕರಣಗಳಲ್ಲಿ ಈ ಹಿಂದೆ ಬಂಧಿಸಲಾದ ಸುಮಾರು 4,000 ಜನರನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!