ಥಾಯ್ಲೆಂಡ್ ರಾಜಕುಮಾರಿಗೆ ಹೃದಯಾಘಾತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಥಾಯ್ಲೆಂಡ್‌ನ ಸಿಂಹಾಸನದ ಉತ್ತರಾಧಿಕಾರಿ, ರಾಜಕುಮಾರಿ ಬಜ್ರಕಿತಿಯಾಭಾ ಅವರಿಗೆ ಹೃದಯಾಘಾತವಾಗಿದೆ.
ಹೊರಗೆ ತೆರಳಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಬ್ಯಾಂಕಾಕ್‌ನ ಈಶಾನ್ಯ ಪ್ರದೇಶದಲ್ಲಿ ತನ್ನ ನಾಯಿಗಳಿಗೆ ತರಬೇತಿ ನೀಡುತ್ತಿದ್ದ ವೇಳೆ ಕುಸಿದುಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಸ್ಥಿತಿ ಚಿಂತಾಜನಕಾಗಿದೆ ಎಂದು ಅರಮನೆ ಮೂಲಗಳು ತಿಳಿಸಿವೆ. ಥಾಯ್ ರಾಜ ಮಗಳೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ.ಈಗಿನ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ದೊರೆತಿಲ್ಲ. ಒಂದು ಗಂಟಗೂ ಹೆಚ್ಚು ಕಾಲ ಸಿಪಿಆರ್ ಮಾಡಿದ್ದು, ಪ್ರಯತ್ನ ವಿಫಲವಾಗಿತ್ತು ಎಂದು ಮಿರರ್ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!