ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಚಿತ್ರ ‘ತಲೈವಿ’ ಸೆಪ್ಟೆಂಬರ್ 10ರಂದು ತೆರೆ ಕಾಣಲಿದ್ದು, ಇದಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದ್ದು, ಜಯಲಲಿತಾ ಆಗಿ ನಟನೆ ಮಾಡಿರುವ ಕಂಗನಾ ಖುದ್ದಾಗಿ ಈ ಮಾಹಿತಿ ಶೇರ್ ಮಾಡಿದ್ದಾರೆ.
ಈಗಾಗಲೇ ಫಸ್ಟ್ ಲುಕ್ ಹಾಗೂ ಟೀಸರ್ನೊಂದಿಗೆ ಹೆಚ್ಚು ಗಮನ ಸೆಳೆದಿರುವ ಚಿತ್ರ ಜಯಲಲಿತಾ ಅವರ ಜೀವನದ ಪ್ರಮುಖ ಹಂತಗಳ ಬಗ್ಗೆ ಬೆಳಕು ಚೆಲ್ಲಲಿದೆ. ಈ ಸಿನಿಮಾ ಏಪ್ರಿಲ್ 23ರಂದು ತೆರೆ ಕಾಣಬೇಕಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿತ್ತು.
ವಿನಯ್ ನಿರ್ದೇಶನದ ತಲೈವಿ ಚಿತ್ರಕ್ಕೆ ವಿಷ್ಣುವರ್ಧನ್ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣವಿದೆ. ಜಯಲಲಿತಾ ಅವರ ರಾಜಕೀಯ ಗುರು ಎಂ.ಜಿ ರಾಮಚಂದ್ರನ್ ಅವರ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ.
ಬಾಹುಬಲಿ ಮತ್ತು ಮಣಿಕರ್ಣಿಕಾ ಸಿನಿಮಾಗಳಿಗೆ ಚಿತ್ರಕಥೆ ಬರೆದಿರುವ ಕೆವಿ ವಿಜಯೇಂದ್ರ ಪ್ರಸಾದ್ ಮತ್ತು ದ ಡರ್ಟಿ ಪಿಕ್ಚರ್ ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಸಿನಿಮಾಗೆ ಚಿತ್ರಕಥೆ ಬರೆದಿರುವ ರಜತ್ ಅರೋರಾ ತಲೈವಿ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.