ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಬಿಪಾಶಾ ಬಸು (Bipasha Basu) ಳೆದ ವರ್ಷ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಮನೆಯಲ್ಲಿ ಪುಟಾಣಿ ಜೊತೆ ಸಂತೋಷದಿಂದ ಸಮಯ ಕಳೆಯುತ್ತಿದ್ದಾರೆ.
ಆದ್ರೆ ಇದೀಗ ಮಗಳ ಆರೋಗ್ಯದ ಬಗ್ಗೆ ಬಿಪಾಶಾ ಭಾವುಕರಾಗಿದ್ದಾರೆ.ಅದಕ್ಕೆ ಕಾರಣ ಮಗಳು ಹುಟ್ಟಿದ ಮೂರೇ ದಿನಕ್ಕೆ ಅವಳ ಹಾರ್ಟ್‌ನಲ್ಲಿ ರಂಧ್ರವಿರುವ ವಿಚಾರ ಗೊತ್ತಾದ ಸಂಗತಿ ನೆನೆಸಿಕೊಂಡು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ನಟಿ ನೇಹಾ ಧೂಪಿಯಾ ಅವರೊಂದಿಗೆ ಮಾತನಾಡಿದ ಬಿಪಾಶಾ, ಮಗಳೂ ದೇವಿ ಮೂರು ತಿಂಗಳ ಮಗುವಾಗಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ನಟಿ ಲೈವ್‌ನಲ್ಲಿ ಈ ಬಗ್ಗೆ ಮಾತನಾಡಿ ʻನಮ್ಮ ಪ್ರಯಾಣ ಸಾಮಾನ್ಯ ತಾಯಿ-ತಂದೆಗಿಂತ ತುಂಬಾ ಭಿನ್ನವಾಗಿದೆ. ಯಾವ ತಾಯಿಗೂ ಹೀಗಾಗದಿರಲಿ ಎಂದು ನಾನು ಬಯಸುತ್ತೇನೆ. ಮಗಳು ಹುಟ್ಟಿದ ಮೂರನೇ ದಿನಕ್ಕೆ ಮಗಳು ದೇವಿಗೆ ಹಾರ್ಟ್‌ನಲ್ಲಿ ರಂಧ್ರವಿರುವುದು ಗೊತ್ತಾಯ್ತು. ಈ ಪ್ರಯಾಣದಲ್ಲಿ ನನಗೆ ಸಹಾಯ ಮಾಡಿದ ಬಹಳಷ್ಟು ತಾಯಂದಿರು ಇದ್ದಾರೆʼʼ ಎಂದು ವಿವರಿಸಿದ್ದಾರೆ.
ದೇವಿಗೆ ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ ಇರುವುದು ಪತ್ತೆಯಾಯಿತು ವಿಎಸ್‌ಡಿ ಎಂದರೇನು ಎಂಬುದು ನಮಗೆ ಅರ್ಥವಾಗಲಿಲ್ಲ. ಅದೊಂದು ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್. ಈ ವಿಚಾರ ಗೊತ್ತಾದಾಗ ನಾವು ನಮ್ಮ ಮನೆಯವರೊಂದಿಗೆ ಈ ಬಗ್ಗೆ ಚರ್ಚಿಸಲಿಲ್ಲ. ಮೊದಲ ಐದು ತಿಂಗಳು ನಮಗೆ ತುಂಬಾ ಕಷ್ಟಕರವಾಗಿತ್ತು. ಮಗುವಿನ ಹೃದಯದಲ್ಲಿ ರಂಧ್ರಗಳಿರುವ ವಿಚಾರ ಮೂರು ದಿನಗಳ ನಂತರ ನಮಗೆ ತಿಳಿಯಿತು. ಸರಿ ಆಗಬಹುದು ಎಂದು ಕಾದೆವು. ಆದರೆ, ಆಗಲಿಲ್ಲ. ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ತುಂಬಾ ಕಷ್ಟ. ಕೊನೆಗೂ ನಾವು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡೆವು. ಬಳಿಕ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡಿದರು ಎಂದು ನಟಿ ಬಿಪಾಶಾ ತಿಳಿಸಿದರು.
ಮಗಳು ಆಪರೇಷನ್ ಥಿಯೇಟರ್‌ನಲ್ಲಿದ್ದ ಆ 6 ಗಂಟೆ ನನ್ನ ಪ್ರಾಣವೇ ನಿಂತು ಹೋದಂತೆ ಭಾಸವಾಗಿತ್ತು. ದೇವಿ (Devi) ಈಗ ಆರಾಮಾಗಿದ್ದಾಳೆ. ದೇವಿ ಆರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆಯಲ್ಲಿದ್ದಳು. 40 ದಿನ ನಾನು ನಿದ್ದೆ ಮಾಡಿಲ್ಲ . ನಾನು ಸುಳ್ಳು ಹೇಳುತ್ತಿಲ್ಲ. ನಾನು ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆʼʼ ಎಂದಿದ್ದಾರೆ.