ಇನ್ಫೋಸಿಸ್‌ ನಲ್ಲಿ ಕೆಲಸಕ್ಕೆ ಸೇರಿದ ಚಿರತೆಗೂ 70 ಗಂಟೆಗಳ ಕಾಲ ಕೆಲಸ?: ವೈರಲ್ ಆಗ್ತಿದೆ ಮೀಮ್ಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಡಿಸೆಂಬರ್‌ 31 ರಂದು ಚಿರತೆ ಕಾಣಿಸಿಕೊಂಡ ಹಿನ್ನೆಲೆ ಸುರಕ್ಷತೆಯ ದೃಷ್ಟಿಯಿಂದ ಇನ್ಫೋಸಿಸ್‌ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಇತ್ತ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಆದ್ರೆ ಚಿರತೆ ಮಾತ್ರ ಇನ್ನೂ ಪತ್ತೆಯಾಗಿಲ್ಲ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ಸ್‌, ಮೀಮ್ಸ್‌ಗಳು ಕೂಡಾ ಹರಿದಾಡುತ್ತಿದ್ದು, ಇನ್ಫೋಸಿಸ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಕೊಡಲು ಚಿರತೆಯಿಂದ ಮಾತ್ರ ಸಾಧ್ಯ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

https://x.com/MallikarjunaNH/status/1875813322857337314?ref_src=twsrc%5Etfw%7Ctwcamp%5Etweetembed%7Ctwterm%5E1875813322857337314%7Ctwgr%5Eb10ecbe99d70e64ec65cace5a4457b66c51751d7%7Ctwcon%5Es1_&ref_url=https%3A%2F%2Ftv9kannada.com%2Ftrending%2Fonly-leopard-can-give-infosys-work-from-home-about-infosys-mysuru-campus-hilarious-memes-are-goes-viral-kannada-news-mda-961575.html

ಕೆಲ ಸಮಯಗಳ ಹಿಂದೆಯಷ್ಟೇ ಇನ್ಫೋಸಿಸ್‌ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಯುವಕರು ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕು ಎಂದು ಹೇಳಿಕೆಯನ್ನು ನೀಡಿದ್ದರು. ಈ ಮಾತನ್ನೇ ಮುಂದಿಟ್ಟುಕೊಂಡು ಎಕ್ಸ್‌ ಪೇಜ್‌ ಒಂದರಲ್ಲಿ ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡ ಚಿರತೆ ಜ್ಯೂನಿಯರ್‌ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದೆ. ಅದಕ್ಕೂ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಲಾಗಿದೆ ಎಂದು ಟ್ರೋಲ್‌ ಮಾಡಿದ್ದಾರೆ.

ಇನ್ನೊಬ್ಬ ಎಕ್ಸ್‌ ಬಳಕೆದಾರರು ಚಿರತೆಯಿಂದ ಮಾತ್ರ ಇನ್ಫೋಸಿಸ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಕೊಡಲು ಸಾಧ್ಯ ಎಂದು ತಮಾಷೆ ಮಾಡಿದ್ದಾರೆ.

ಈ ಎಲ್ಲಾ ಟ್ರೋಲ್‌ ಮೀಮ್ಸ್‌ಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!