Thursday, August 11, 2022

Latest Posts

ಎಸಿಬಿ ಬಲೆಗೆ ಬಿದ್ದ ಕೊಪ್ಪಳ ಬಿಇಓ ಉಮಾದೇವಿ ಸೊನ್ನದ್, ಎಸ್ಡಿಎ ಅರುಂದತಿ

ಹೊಸ ದಿಗಂತ ವರದಿ, ಕೊಪ್ಪಳ:

ಶಾಲೆಯ ಠೇವವಣಿ ಹಣ ವಾಪಸ್ ನೀಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಕೊಪ್ಪಳ ಬಿಇಓ ಆಫಿಸ್ ನಲ್ಲಿ ಎಸಿಬಿ ಅಧಿಕಾರಿಗಳು ದಾಳಿಗೆ ಇಬ್ನರು ಬಲೆಗೆ ಬಿದ್ದಿದ್ದಾರೆ.
ಬಲೆಗೆ ಬಿದ್ದ ಕೊಪ್ಪಳ ಬಿಇಓ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ್, ಎಸ್ಡಿಎ ಅರುಂದತಿ ಬಲೆಗೆ ಬಿದ್ದ ಆರೋಪಿಗಳಾಗಿದ್ದಾರೆ.
ಭಾಗ್ಯನಗರ ಎಸ್. ಎಸ್. ಕೆ ಶಾಲೆಯ ಬಂದ್ ಆದ ಕಾರಣ ಠೇವಣಿಯ 10 ಸಾವಿರ ಹಣವನ್ನು ವಾಪಸ್ ನೀಡುವಂತೆ ಶಾಲೆಯ ಮುಖ್ಯಸ್ಥರಾದ ಬಾಲು ಕಬಾಡಿಯವರು ಮನವಿ ಮಾಡಲಾಗಿತ್ತು. ಆದರೆ ಮನವಿಗೆ ಸ್ಪಂದಿಸದ ಬಿಇಓ ಅವರು ಸುಮಾರು ದಿನಗಳ ಕಾಲ ಕಾಲಹರಣ ಅಡ್ಡಾಡಿಸಿದ್ದಾರೆ. ಆದರೆ ಕೊನೆಗೆ 10 ಸಾವಿರ ರೂಪಾಯಿಯಲ್ಲಿ 5 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಯಿಂದಾಗಿ ದೂರುದಾರ ಬಾಲು ಕಬಾಡಿಯವರು ಎಸಿಬಿಗೆ ದೂರು ನೀಡಿದ್ದಾರೆ.
ಆದರೆ ಗುರುವಾರ ಸಂಜೆ ಬೇಡಿಕೆಯ ಹಣದ 3.5 ಸಾವಿರ ಹಣ ನೀಡುವಾಗ ದಾಳಿ ನಡೆಸಿದ್ದಾರೆ.
ದೂರಿನ ಆದಾರದ ಮೇಲೆ ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಿವಕುಮಾರ್, ಎಸ್ ಐ ಎಸ್ ಎಸ್ ಬೀಳಗಿ, ಎಸೈ ಬಾಳನಗೌಡ ತಂಡದಿಂದ ದಾಳಿ ನಡೆಸಿ ಬಲೆಗೆಗೆ ಬಿದ್ದಿದ್ದಾರೆ.
ಎಸ್ಡಿಎ ಅರುಂದತಿಯು ಬಂಧಿಸಿದ್ದು ಬಿಇಓ ಶ್ರೀಮತಿ ಉಮಾದೇವಿ ಸೊನ್ನದ, ಅವರು ತಲೆಮೆರಿಸಿಕೊಂಡಿದ್ದಾಳೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss