ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಸ್ ಮಹಾರಾಜ ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ಸಿನಿಮಾ ಥಿಯೇಟರ್‌ನಲ್ಲಿ ಮಕಾಡೆ ಮಲಗಿದೆ. ಇದರಿಂದ ನಿರ್ಮಾಪಕರಿಗೂ ಭಾರೀ ನಷ್ಟವಾದ ಹಿನ್ನೆಲೆ 4 ಕೋಟಿ ರೂ. ಸಂಭಾವನೆಯನ್ನು ರವಿತೇಜ ಹಿಂದಿರುಗಿಸಿದ್ದಾರೆ.
ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ಚಿತ್ರವನ್ನು ಹರೀಶ್ ಶಂಕರ್ ನಿದೇಶನ ಮಾಡಿದ್ದು, ಆ.15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. 85 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಅರ್ಧ ಭಾಗದಷ್ಟು ಕಲೆಕ್ಷನ್ ಮಾಡೋದ್ರಲ್ಲಿ ಸೋತಿದೆ. ಇದರಿಂದ ನಿರ್ಮಾಣ ಸಂಸ್ಥೆ ನಷ್ಟ ಅನುಭವಿಸಿದೆ.
ಈ ಹಿನ್ನೆಲೆ ತಾವು ಪಡೆದುಕೊಂಡ ಸಂಭಾವನೆಯಲ್ಲಿ 4 ಕೋಟಿ ರೂ. ನಟ ರವಿತೇಜ ಹಿಂದಿರುಗಿಸಿದ್ರೆ, ಇತ್ತ ನಿರ್ದೇಶಕ ಹರೀಶ್ ಕೂಡ 2 ಕೋಟಿ ರೂ.ವನ್ನು ನಿರ್ಮಾಪಕರಿಗೆ ನೀಡಿದ್ದಾರೆ