2021 -22ರಲ್ಲಿ 11,658 ಕೋಟಿ ರೂ. ನಷ್ಟ ಅನುಭವಿಸಿದೆ ವಿಮಾನಯಾನ ಉದ್ದಿಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ವಿಮಾನಯಾನ ಉದ್ಯಮವು 2021-22ರಲ್ಲಿ ₹11,658 ಕೋಟಿ ನಷ್ಟ ಅನುಭವಿಸಿದೆ ಎಂದು ಸರ್ಕಾರ ತಿಳಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಉದ್ಯಮದಿಂದ ಉಂಟಾದ ನಷ್ಟವು 2019-20ರಲ್ಲಿ 4,770 ಕೋಟಿ ರೂ., 2020-21ರಲ್ಲಿ 12,479 ಕೋಟಿ ರೂ. ಮತ್ತು 2021-22ನೇ ಆರ್ಥಿಕ ವರ್ಷದಲ್ಲಿ 11,658 ಕೋಟಿ ರೂ.ಗಳಷ್ಟಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಲೋಕಸಭೆಗೆ ಗುರುವಾರ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೋವಿಡ್-ಪ್ರೇರಿತ ಅಡಚಣೆಗಳು, ರುಪಾಯಿ ಮೌಲ್ಯದಲ್ಲಿನ ಕುಸಿತ, ನಿರ್ವಹಣಾ ವೆಚ್ಚದಲ್ಲಿನ ಹೆಚ್ಚಳ ಅದರಲ್ಲೂ ಮುಖ್ಯವಾಗಿ ವಿಮಾನ ಇಂಧನಬೆಲೆಗಳ ಏರಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ವ್ಯಾಟ್; ಅಬಕಾರಿ ತೆರಿಗೆ; ಮತ್ತು ರಷ್ಯಾ ಉಕ್ರೇನ್‌ ಯುದ್ಧಗಳು ವಿಮಾನಯಾನ ಸಂಸ್ಥೆಗಳ ನಷ್ಟಕ್ಕೆ ಪ್ರಮುಖ ಕಾರಣಗಳಾಗಿವೆ. ವೆಚ್ಚ ಹೆಚ್ಚಳವನ್ನು ಪರಿಣಾಮಗಳನ್ನು ಎದುರಿಸಲು ವಿಮಾನಯಾನ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರವು ವಿಮಾನಯಾನ ಉದ್ಯಮದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದ ಅವರು ವಿಜಿಎಫ್ (ವಯಬಲ್ ಗ್ಯಾಪ್ ಫಂಡಿಂಗ್), ಇಂಧನ ದರಗಳ ಮೇಲಿನ ರಿಯಾಯಿತಿ, ಲ್ಯಾಂಡಿಂಗ್/ಪಾರ್ಕಿಂಗ್ ಶುಲ್ಕಗಳು ಮತ್ತು ಸೇವೆ ಸಲ್ಲಿಸದ ವಿಮಾನ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಅಗತ್ಯ ಕ್ರಮ ಕೈಗೊಂಡಿರುವುದು ದೊಡ್ಡ ವಿಮಾನಯಾನ ಕಂಪನಿಗಳ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ಅಲ್ಲದೇ ಸ್ಟಾರ್ ಏರ್ ಮತ್ತು ಇಂಡಿಯಾ ಒನ್ ಏರ್ ಮತ್ತು ಫ್ಲೈಬಿಗ್‌ನಂತಹ ಪ್ರಾದೇಶಿಕ ಸ್ಟಾರ್ಟ್-ಅಪ್ ಏರ್‌ಲೈನ್‌ಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಿದೆ. ಅಲ್ಲದೇ ವಿಮಾನಯಾನ ಇಂಧನಗಳ ಮೇಲಿನ ವ್ಯಾಟ್‌ ಸುಂಕ ಕಡಿಮೆ ಮಾಡಲು ಸರ್ಕಾರವು ಕ್ರಮವಹಿಸಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!