ಅನ್ನದಾತನ ಆಕ್ರೋಶ: ಸೂಕ್ತ ಬೆಲೆ ಸಿಗದೆ ಜಮೀನಿನಲ್ಲೇ ಕೊತ್ತಂಬರಿ ಬೆಳೆಯನ್ನು ನಾಶ ಮಾಡಿದ ರೈತ

ಹೊಸದಿಗಂತ ವರದಿ ಹಾಸನ: ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ನ್ಯಾಯಯುತ ಬೆಲೆ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡ ರೈತರೊಬ್ಬರು ತಾವು ಬೆಳೆದ ಬೆಳೆಯನ್ನು ಜಮೀನಿನಲ್ಲೇ ಟ್ರ್ಯಾಕ್ಟರ್ ಮೂಲಕ   ನಾಶಪಡಿಸಿರುವ ಘಟನೆ ಹಾಸನ ತಾಲೂಕಿನ ದುದ್ದ ಹೋಬಳಿಯ ಹರಿಹರಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಸತೀಶ್ ಅವರು ಒಂದು ಎಕರೆ ಜಮೀನಿನಲ್ಲಿ ಸಾಲ ಮಾಡಿ ಕೊತ್ತಂಬರಿ ಬೆಳೆ ಬೆಳೆದಿದ್ದರು. ಉತ್ತಮ ಇಳುವರಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಯೂ ದೊರೆಯದ ಪರಿಣಾಮ ಬೆಳೆಯನ್ನು ಮಾರಾಟ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ. … Continue reading ಅನ್ನದಾತನ ಆಕ್ರೋಶ: ಸೂಕ್ತ ಬೆಲೆ ಸಿಗದೆ ಜಮೀನಿನಲ್ಲೇ ಕೊತ್ತಂಬರಿ ಬೆಳೆಯನ್ನು ನಾಶ ಮಾಡಿದ ರೈತ